ಕಣಿವೆ, ಡಿ. ೬ : ಕುಶಾಲನಗರದ ಬೈಪಾಸ್ ರಸ್ತೆಯಲ್ಲಿರುವ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಆರ್ಥಿಕ ವರ್ಷದಲ್ಲಿ ಗಳಿಸಿರುವ ೭೦.೮೦ ಲಕ್ಷ ಲಾಭಾಂಶದಲ್ಲಿ ಸಂಘದಲ್ಲಿನ ೧೫೦೦ ಸದಸ್ಯರಿಗೆ ೧೪.೫ ಡಿವಿಡೆಂಡ್ ವಿತರಿಸಲಾಯಿತು.

ಹಾಗೆಯೇ ಸದಸ್ಯರ ಮರಣೋತ್ತರ ನಿಧಿಗೆ ೨೦ ಲಕ್ಷ ಹಣವನ್ನು ಮೀಸಲಿಡುವುದಾಗಿ ಪ್ರಕಟಿಸಿದ ಸಂಘದ ಅಧ್ಯಕ್ಷ ಶರವಣಕುಮಾರ್, ಸಂಘದ ಸದಸ್ಯರ ಕುಟುಂಬ ಸದಸ್ಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪಟ್ಟಣದ ಬಿಎಂ ರಸ್ತೆಯ ಹಿಲಾಲ್ ಮಸೀದಿ ಬಳಿ ೨೦ ಸೆಂಟು ಖಾಲಿ ನಿವೇಶನವನ್ನು ೨.೦೫ ಕೋಟಿ ರೂಗಳನ್ನು ವ್ಯಯಿಸಿ ಖರೀದಿಸಿರುವುದು ಸಹಕಾರ ಸಂಘದ ಬಹುದೊಡ್ಡ ಸಾಧನೆ ಎಂದು ಸಭೆಗೆ ತಿಳಿಸಿದರು.

ಸಹಕಾರ ಸಂಘದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರಂಭಿಸಿದ್ದ ಹಸಿರು ನಿಧಿ ಯೋಜನೆಯ ಬಗ್ಗೆ ಮಾಹಿತಿಯಿತ್ತ ಶರವಣಕುಮಾರ್, ಈಗಾಗಲೇ ಹಸಿರು ನಿಧಿ ಯೋಜನೆಗೆ ೪ ಲಕ್ಷ ಹಣ ಸಂಗ್ರಹವಾಗಿದೆ. ಸಂಘದಲ್ಲಿ ಸಾಲ ಪಡೆಯುವ ಪ್ರತೀ ಸದಸ್ಯ ತನಗಿಚ್ಛೆ ಬಂದ ಕಡೆ ತಲಾ ಒಂದು ಗಿಡ ನೆಟ್ಟು ಬೆಳೆಸುವ ಮೂಲಕ ಹಸಿರು ಪರಿಸರವನ್ನು ಉತ್ತೇಜಿಸುವ ಯೋಜನೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಯಕಲ್ಪ ನೀಡಲಾಗುತ್ತದೆ ಎಂದು ಉತ್ತರಿಸಿದರು.

ಸಂಘದ ಸದಸ್ಯರಾದ ಕೆ.ಎನ್. ಸಂಘದಲ್ಲಿ ಸಾಲ ಪಡೆಯುವ ಪ್ರತೀ ಸದಸ್ಯ ತನಗಿಚ್ಛೆ ಬಂದ ಕಡೆ ತಲಾ ಒಂದು ಗಿಡ ನೆಟ್ಟು ಬೆಳೆಸುವ ಮೂಲಕ ಹಸಿರು ಪರಿಸರವನ್ನು ಉತ್ತೇಜಿಸುವ ಯೋಜನೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಯಕಲ್ಪ ನೀಡಲಾಗುತ್ತದೆ ಎಂದು ಉತ್ತರಿಸಿದರು.

ಸಂಘದ ಸದಸ್ಯರಾದ ಕೆ.ಎನ್.