ಸಿದ್ದಾಪುರ, ಡಿ. ೬: ದಾನ ಮಾಡುವ ಮನಸ್ಸುಗಳು ಮುಂದೆ ಬಂದರೆ ಸಂಕಷ್ಟದಲ್ಲಿರುವವರ ಬಾಳು ಬೆಳಗಲಿದೆ ಎಂದು ಕೊಡಗು ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮೊಹಮ್ಮದ್ ಅಭಿಪ್ರಾಯ ಪಟ್ಟರು. ಮಾಲ್ದಾರೆಯಲ್ಲಿ ಸೂಕ್ತ ಮನೆಯಿಲ್ಲದೆ ಸಂಕಷ್ಟಕ್ಕೊಳಗಾಗಿದ್ದ ಸಂತ್ರಸ್ತ ಕುಟುಂಬಕ್ಕೆ ಕೆಬಿಬಿ ಟ್ರಸ್ಟ್ ಮೂಲಕ ಮನೆ ನಿರ್ಮಿಸಿಕೊಟ್ಟು ಕೀ ಹಸ್ತಾಂತರಿಸಿ ಅವರು ಮಾತನಾಡಿ ದರು. ಟ್ರಸ್ಟ್ ಕಳೆದ ೫ ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಜಾತಿ ಮತ ಭೇದವಿಲ್ಲದೆ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಧನಸಹಾಯ, ಸಂತ್ರಸ್ತ ಕುಟುಂಬಗಳಿಗೆ ಕಿಟ್ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ದಾನಿಗಳ ಸಹಕಾರದಿಂದ ಈ ಹಿಂದೆ ವೀರಾಜಪೇಟೆ ಗುಂಡಿಗೆರೆ ಯಲ್ಲಿ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಕಳೆದ ವರ್ಷ ರೂಪಾಯಿ ಹತ್ತು ಲಕ್ಷ ವೆಚ್ಚದ ಮನೆ ನಿರ್ಮಿಸಿ ಕೊಡಲಾಗಿದೆ.
ಮಾಲ್ದಾರೆಯಲ್ಲಿ ಮನೆಯಿಲ್ಲದೆ ಸಂಕಷ್ಟದಲ್ಲಿದ್ದ ಮಹಿಳೆಯೊಬ್ಬರಿಗೆ ರೂ. ೫.೫ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ ಎಂದರು.
ಕೊಡಗಿನ ಖಾಝಿಗಳಾದ ಎಂ.ಎA. ಅಬ್ದುಲ್ಲಾ ಫೈಝಿ, ಸಾದುಲಿ ಫೈಝಿ, ಕೊಡಗು ಬಡವರ ಬೆಳಕು ಟ್ರಸ್ಟ್ನ ಗೌರವ ಅಧ್ಯಕ್ಷ ಸಿ.ಎ. ಪತ್ಹಾಹ್‌ಕಡಂಗ, ಕಾರ್ಯದರ್ಶಿ ಜಲೀಲ್ ಅಮ್ಮತ್ತಿ, ಖಜಾಂಚಿ ಪಿ.ಎ. ಮಜೀದ್, ಆದೂರು ಮೊಹಮ್ಮದ್ ಸುಹೈಲ್ ತಂಗಳ್, ಬಾಳಗೊಡು ಖತೀಬ್ ಮದನಿ ಉಸ್ತಾದ್, ಸಮಾಜ ಸೇವಕರಾದ ಮಾಪಳೆತೋಡು ಸಮದ್, ಮಜೀದ್ ಚೋಕಂಡಳ್ಳಿ, ಸಿ.ಎಂ. ಕರೀಂ ಸಿದ್ದಾಪುರ, ಮಾಲ್ದಾರೆ ಗ್ರಾ.ಪಂ. ಸದಸ್ಯ ಹನೀಪ್, ಪ್ರಮುಖರಾದ ಅಬೂಬಕ್ಕರ್ ಮದನಿ, ಅಂದು, ಶಮಿಲ್, ಮೊಹಮ್ಮದ್ ಅಲಿ, ಇಬ್ರಾಹಿಮ್, ಕಮರುದ್ದೀನ್, ಸಂಶೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.