ಶ್ರೀಮಂಗಲ, ಡಿ. ೫: ಉನ್ನತ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಕೊಡವ ಯುವಜನಾಂಗ ಕೊಡವ ಜನಾಂಗದ ರಕ್ಷಣೆ, ಅಭಿವೃದ್ಧಿಗೆ ತಮ್ಮಿಂದಾಗುವ ಕೊಡುಗೆ ನೀಡಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಅಂತಾರಾಷ್ಟಿçÃಯ ಹಾಕಿ ಆಟಗಾರ ಮೊಳ್ಳೆರ ಗಣೇಶ್ ಕರೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಪುತ್ತರಿ ಕೋಲ್ ಮಂದ್ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಆರಂಭದ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಗಣೇಶ್ ತಮ್ಮ ಈ ಸಾಧನೆಗೆ ಮಾರ್ಗದರ್ಶನ ನೀಡಿದ್ದ ಸೇನೆಯಲ್ಲಿದ್ದ ಮುಂಡುಮಾಡ ಉತ್ತಯ್ಯ ಅವÀರನ್ನು ಸ್ಮರಿಸಿದರು. ಕೊಡವರು ಪುರೋಹಿತಶಾಹಿ ಪದ್ದತಿ ಬಗ್ಗೆ ನಂಬಿಕೆ ಬಿಟ್ಟು ಕೊಡವ ಮೂಲ ಸಂಸ್ಕೃತಿಯ ಮೇಲೆ ಹೆಚ್ಚಿನ ನಂಬಿಕೆ ಇಡುವಂತೆ ಸಲಹೆಯಿತ್ತರು.

ಮತ್ತೋರ್ವ ಅತಿಥಿ ಅಂತಾರಾಷ್ಟಿçÃಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ವ್ಯಕ್ತಿ, ಕುಟುಂಬ, ಸಮಾಜ ಸಂಸ್ಕೃತಿಯನ್ನು ಮರೆಯಬಾರದು ಎಂದರು.

ಕೊಡವ ಜಾನಪದ ತಜ್ಞ, ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರನ್ನು ಸಾವಿರಾರು ಕಿರಿಯರಿಗೆ ಕೊಡವ ಜಾನಪದವನ್ನು ಕಲಿಸಿ, ಪಸರಿಸಿದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್'ಮಾಡÀ ರಾಜೀವ್ ಬೋಪಯ್ಯ ಅವರು ನಮ್ಮ ಸಂಸ್ಕೃತಿಯಿAದ ದೂರವಾಗಿ ಪುರೋಹಿತಶಾಹಿ ವ್ಯವಸ್ಥೆಯ ಪ್ರಭಾವ,ಆಧುನಿಕ ನಾಗರಿಕತೆಯ ಅನುಸರಣೆ, ರಾಜಕೀಯ ಪಕ್ಷಗಳ ಮೇಲಿನ ನಿಷ್ಠೆ ಇವೆಲ್ಲದರಿಂದ ಕೊಡವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿದೆ. ಮನೆಯಲ್ಲಿ ಮತ್ತು ಜನಾಂಗದವರು ಸೇರುವಾಗ ಕೊಡವ ಭಾಷೆಯಲ್ಲೇ ಮಾತನಾಡಬೇಕು. ಕೊಡವರು ತಮ್ಮ ಮೂಲ ಸಂಸ್ಕೃತಿಯನ್ನು ನಿರ್ಲಕ್ಷಿಸದೇ ಅಳವಡಿಸಿಕೊಂಡರೆ ಯುವ ಪೀಳಿಗೆಯು ಅದನ್ನು ಅನುಸರಿಸರಿಸಿ ಕೊಂಡು ಮುನ್ನಡೆಯುತ್ತದೆ ಎಂದರು.

ಮೊಳ್ಳೆರ ಗಣೇಶ್ ಅವರ ಪರಿಚಯವನ್ನು ಹಾಕಿ ಆಟಗಾರ ಚೆಪ್ಪುಡಿರ ಕಾರ್ಯಪ್ಪ, ತೀತಮಾಡ ಅರ್ಜುನ್ ದೇವಯ್ಯ ಅವರ ಪರಿಚಯವನ್ನು ಕೊಡವ ಸಮಾಜದ ನಿರ್ದೇಶಕ ಮಂಡಚAಡ ದಿನೇಶ್ ಚಿಟ್ಟಿಯಪ್ಪ ಮಾಡಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಗೌ.ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೆರAಡ ಶಾರದಾ, ಖಜಾಂಚಿ ಮೂಕಳೇರ ಲಕ್ಷö್ಮಣ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭು ಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನಿಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಚೆಪ್ಪುಡಿರ ರೂಪ ಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.

ಪದ್ಧತಿಯಂತೆ ಕೊಡವ ಸಮಾಜ ಮಂದ್‌ನಲ್ಲಿ ಪುತ್ತರಿ ಕೋಲಾಟ್ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಬಿರುನಾಣಿ ಪುತ್ತು ಭಗವತಿ ಮಹಿಳಾ ತಂಡದಿAದ ಉಮ್ಮತ್ತಾಟ್, ಟಿ.ಶೆಟ್ಟಿಗೇರಿ ರೂಟ್ಸ್ ಶಾಲಾ ಮಕ್ಕಳಿಂದ ಕೊಡವ ನೃತ್ಯ, ಪರೆಯಕಳಿ, ಕತ್ತಿಯಾಟ್, ಪುತ್ತರಿ ಕೋಲಾಟ್, ತಾಳಿಪಾಟ್, ಕಪ್ಪೆಯಾಟ್, ಡಾ. ಕಾಳಿಮಾಡ ಶಿವಪ್ಪ, ಚೇಂದAಡ ಸುಮಿ ಸುಬ್ಬಯ್ಯ ಅವರಿಂದ ಕೊಡವ ಹಾಡು ಕಾರ್ಯಕ್ರಮ ನಡೆಯಿತು. ಸಾಮೂಹಿಕವಾಗಿ ವಾಲಗತಾಟ್ ಗಮನ ಸೆಳೆಯಿತು.

ಉಳುವಂಗಡ ಲೋಹಿತ ಭೀಮಯ್ಯ ಪ್ರಾರ್ಥಿಸಿದರು, ಕಾಳಿಮಾಡ ಮೋಟಯ್ಯ, ಪೊನ್ನಿಮಾಡ ಸುರೇಶ್ ನಿರೂಪಿಸಿದರು. ಚೊಟ್ಟೆಕ್'ಮಾಡ ರಾಜೀವ್ ಬೋಪಯ್ಯ ಸ್ವಾಗತಿಸಿ, ಮಲ್ಲಮಾಡ ಪ್ರಭು ಪೂಣಚ್ಚ ವಂದಿಸಿದರು.