\ಮಡಿಕೇರಿ, ಡಿ. ೪: ಮನೆ ಒಳಗಡೆ, ಹೊರಗಡೆ ಮುದ್ದಾಗಿ ಸಾಕಿ ಸಲಹುವ ಮುದ್ದು ಪ್ರಾಣಿಗಳಿಗೆ ಇದುವರೆಗೆ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಲಭ್ಯವಾಗುತ್ತಿತ್ತು. ಆದರೆ, ಇನ್ನು ಮುಂದಕ್ಕೆ ಈ ಮುದ್ದು ಪ್ರಾಣಿಗಳ ಚಿಕಿತ್ಸೆಗೆ ಸರಕಾರ ಕನಿಷ್ಟ ಶುಲ್ಕ ನಿಗದಿಪಡಿಸಿ ಆದೇಶಿಸಿದೆ..!

ಪ್ರಾಣಿ ಪ್ರಿಯರು ತಮ್ಮ ಮನೆಗಳಲ್ಲಿ ಪ್ರೀತಿಯಿಂದ ನಾಯಿ, ಬೆಕ್ಕು, ಪಕ್ಷಿ, ಇತರ ಪ್ರಾಣಿಗಳನ್ನು ಹಾಗೂ ಅವಶ್ಯಕತೆಗನುಗುಣವಾಗಿ ಕುರಿ, ಮೇಕೆ, ದನ, ಎಮ್ಮೆ, ಕೋಳಿಗಳನ್ನು ಸಾಕಿ ಸಲಹುವುದು ಸಾಮಾನ್ಯವಾಗಿದೆ. ಈ ಪ್ರಾಣಿ ಪಕ್ಷಿಗಳಿಗೆ ಗಾಯಗಳಾದಾಗ, ಕಾಯಿಲೆಗಳು ಬಂದಾಗ ಪಶು ಚಿಕಿತ್ಸಾಲಯಗಳಲ್ಲಿ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಲಭಿಸುತ್ತಿತ್ತು. ಇದೀಗ ಪಶು ಸಂಗೋಪನಾ ಇಲಾಖೆ ಮುದ್ದು ಪ್ರಾಣಿಗಳ ಚಿಕಿತ್ಸೆಗೆ ಕನಿಷ್ಟ ಶುಲ್ಕ ವಿಧಿಸಿ ಆದೇಶಿಸಿದೆ.

ನಾಯಿ, ಬೆಕ್ಕಿಗೆ ಶುಲ್ಕ: ರಾಷ್ಟಿçÃಯ ಜಾನುವಾರು ಪಾಲಿಸಿ ೨೦೧೩ ಕಂಡಿಕೆ ೧೩.೧೧ ರಲ್ಲಿ ನಾಯಿ, ಬೆಕ್ಕು,

(ಮೊದಲ ಪುಟದಿಂದ) ಮುದ್ದು ಪಕ್ಷಿಗಳನ್ನು ಮುದ್ದು ಪ್ರಾಣಿಗಳೆಂದು ಪರಿಗಣಿಸಲಾಗಿದ್ದು, ಪೂರ್ಣ ಚಿಕಿತ್ಸಾ ಶುಲ್ಕ ಪಡೆಯಬಹುದೆಂದು ತಿಳಿಸಲಾಗಿದೆ. ಶ್ವಾನಗಳನ್ನು ಜಾನುವಾರು ಘಟಕಗಳಾಗಿ ಪರಿಗಣಿಸಿ ಪಶು ವೈದ್ಯಕೀಯ ಸೇವೆ ನೀಡಲು ಪರಿಗಣಿಸಲಾಗುವದಿಲ್ಲ, ಆದಕಾರಣ ಸೇವಾ ಶುಲ್ಕ ವಿಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಾಯಿ ಮತ್ತು ಬೆಕ್ಕನ್ನು ಮುದ್ದು ಅಥವಾ ಒಡನಾಡಿ ಪ್ರಾಣಿಗಳೆಂದು ಪರಿಗಣಿಸಿ ಕನಿಷ್ಟ ಶುಲ್ಕ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನುಳಿದಂತೆ ದನ,ಎಮ್ಮೆ, ಕುದುರೆ, ಕುರಿ, ಮೇಕೆ, ಹಂದಿ ಹಾಗೂ ಕುಕ್ಕುಟ ಘಟಕಗಳನ್ನು ಕೃಷಿ ಕೊಡುಗೆಗೆಂದು ಪರಿಗಣಿಸಲಾಗಿದ್ದು ಅವುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ. ಪಶು ವೈದ್ಯಕೀಯ ಇಲಾಖೆಗೆ ಇತರ ಯಾವದೇ ಆದಾಯವಿಲ್ಲದ ಹಿನ್ನೆಲೆಯಲ್ಲಿ ಈ ಮುದ್ದು ಪ್ರಾಣಿಗಳ ಚಿಕಿತ್ಸೆಗೆ ಕನಿಷ್ಟ ಶುಲ್ಕ ವಿಧಿಸುವ ಮೂಲಕ ಆದಾಯ ಗಳಿಕೆಗಾಗಿ ಈ ತೀರ್ಮಾನ ಕೈಗೊಳ್ಳ ಲಾಗಿದ್ದು, ಈ ಸಂಬAಧ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಅವರು ಕಳೆದ ನವೆಂಬರ್ ೨೫ರಂದು ಆದೇಶ ಹೊರಡಿಸಿದ್ದಾರೆ.

-ಕುಡೆಕಲ್ ಸಂತೋಷ್