ಮಡಿಕೇರಿ, ಡಿ. ೪: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿಸೆಂಬರ್ ಮಾಹೆಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ ನಡೆಯಲಿದೆ. ತಾ. ೮ ಂದು ಗೋಣಿಕೊಪ್ಪ, ತಾ. ೧೦ ರಂದು ಕುಟ್ಟ, ತಾ. ೧೪ ರಂದು ಕುಶಾಲನಗರ, ತಾ. ೧೫ ರಂದು ಸಿದ್ದಾಪುರ, ತಾ. ೨೧ ರಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾ. ೭ ರಂದು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆ ನಡೆಯಲಿದೆ. ತಾ. ೧೭ ರಂದು ಮಾದಾಪುರ, ತಾ. ೧೮ ರಂದು ಸುಂಟಿಕೊಪ್ಪ, ತಾ. ೨೨ ರಂದು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟ್ಯುಬೆಕ್ಟಮಿ ಶಸ್ತç ಚಿಕಿತ್ಸೆ ನಡೆಯಲಿದೆ.