ಪಂಕೇರುಹಾಣಿ ನವಹಾಸಲಸನ್ಮುಖಾನಿ

ಸಂಧ್ಯಾರುಣಾನಿ ವಿಶದಾನಿ ದಿಗಂತರಾಣಿ |

ನಿದ್ರಾಂವಿಹಾಯ ಶಯನಂ ತ್ಯಜ ವಿಶ್ವಬಂಧೋ

ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ ||

ಕಮಲಗಳು ಹೊಸ ನಗುವಿನಿಂದ ಶೋಬಿಸುವ ಮೊಗಗಳುಳ್ಳವು ಗಳಾಗಿವೆ. ಸಂಧ್ಯೆಯಿAದ ಕೆಂಪಾದ ದಿಙÄ್ಮಂಡಲಗಳು ಸ್ವಚ್ಛವಾಗತೊಡಗಿವೆ. ವಿಶ್ವದ ಬಂಧುವಾದ ಈಶ್ವರನೇ ನಿದ್ದೆಯನ್ನು ಬಿಟ್ಟು ಹಾಸಿಗೆಯಿಂದ ಎದ್ದೇಳು. ಭಗಂಡಮುನಿಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಪ್ರಾಚೀ ವಿಹಾಯ ವಸನಂ ಪರಿಧೂಸರಂ ಯಾ

ಧತ್ತೇಂಶುಕA ರುಚಿರಪಾಟಲವರ್ಣಶೋಭಿ |

ಸಾ ಸೌಖಶಾಯನಿಕಯೋಷಿದಿವ ಪ್ರಭಾತಿ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಯಾವ ಮೂಡಣದಿಕ್ಕು ಮಲಿನವಾದ ಬಟ್ಟೆಯನ್ನು ತೊಟ್ಟಿದ್ದಳೋ ಅವಳು ಈಗ ಕೆಂಪಾದ ಬಟ್ಟೆಯನ್ನು ತೊಟ್ಟು ‘‘ನೀನು ಸುಖನಿದ್ರೆಯನ್ನು ಮಾಡಿದೆಯೋ’’ ಎಂದು ಪ್ರಶ್ನಿಸುವ ಮಹಿಳೆಯ ಹಾಗೆ ಕಾಣುತ್ತಿದ್ದಾಳೆ. ಭಗಂಡಮುನಿಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಕೃತ್ವಾವಗಾಹಮಘಮರ್ಷಣಮುಚ್ಚರಂತೋ

ವಿಪ್ರಾಃ ಕವೇರತನಯಾಕನಕಾಂಬು ಕುಂಭೇ |

ಆಪೂರ್ಯ ಕರ್ತುಮಭಿಷೇಕಮುಪಸ್ಥಿತಾಸ್ತೇ |

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಸ್ನಾನಮಾಡಿ, ಅಘಮರ್ಷಣ ಸೂಕ್ತವನ್ನು ಉಚ್ಚರಿಸುತ್ತಾ, ಬ್ರಾಹ್ಮಣರು ನಿನ್ನ ಅಭಿಷೇಕಕ್ಕೆ ಕಾವೇರಿ ಮತ್ತು ಕನಕೆಯ ತೀರ್ಥಗಳನ್ನು ಪಾತ್ರೆಗಳಲ್ಲಿ ತುಂಬಿ ತರುತ್ತಿದ್ದಾರೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ವಾದ್ಯಾನಿ ವಾದಯತಿ ವಾದಕವೃಂದಮದ್ಯ

ಭಕ್ತಾö್ಯಚ ನೃತ್ಯತಿ ಕುಲಂ ತ್ವಯಿ ನರ್ತಕಾನಾಂ|

ಆನAದಯತ್ಯುಷಸಿ ಗಾತೃಗಣೋ ಜನೌಘಂ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಈಗ ವಾದ್ಯಾದಿಗಳನ್ನು ಬಾರಿಸುವವರು ಅವುಗಳನ್ನು ಬಾರಿಸತೊಡಗಿದ್ದಾರೆ. ನಿನ್ನಲ್ಲಿ ಭಕ್ತಿಯಿಂದ ನರ್ತಕರು ನೃತ್ಯವನ್ನು ಪ್ರಾರಂಭಿಸಿದ್ದಾರೆ. ಹಾಡುವವರ ಗುಂಪು ನಿನ್ನ ದರ್ಶನಕ್ಕೆ ನೆರೆದಿರುವ ಜನಸಮುದಾಯವನ್ನು ಸಂತೋಷಪಡಿಸುತ್ತಿದೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಕಲ್ಯಾಣಕಾರಿ ಭವದುಃಖವಿನಾಶಕಾರಿ

ಸರ್ವಪದುದ್ದರಣಕಾರಿ ಮನೋವಿಹಾರಿ |

ರೂಪಂ ಜನಾ ಉಷಸಿ ವೀಕ್ಷಿತುಮಾಗತಾಸ್ತೇ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಮAಗಳವನ್ನು ಉಂಟುಮಾಡುವ, ಸಂಸಾರ ದುಃಖವನ್ನು ಹೋಗಲಾಡಿಸುವ, ಎಲ್ಲಾ ಆಪತ್ತುಗಳಿಂದ ಪಾರು ಮಾಡುವ, ಮನಸ್ಸಿನಲ್ಲಿ ವಿಹರಿಸುವ ನಿನ್ನ ರೂಪವನ್ನು ಜನರು ಬೆಳಿಗ್ಗೆ ನೋಡಲು ಬಂದಿರುವರು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಸಹ್ಯಾದ್ರಿ ಜಾತಟವಿಭೂಷಣ ನೀಲಕಂಠ

ಲೋಕಾ ಮಿಲಂತಿ ತವ ಮಂಗಲದರ್ಶನಾಯ |

ನಿದ್ರಾಂ ಜಹಾಹಿ ಜಹಿಹಿ ಕ್ಷಣದಾವಸಾನೇ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಸಹ್ಯಪರ್ವತದಿಂದ ಹುಟ್ಟಿದ ಕಾವೇರಿಯ ದಂಡೆಗೆ ಅಲಂಕಾರ ಪ್ರಾಯನಾದವನೇ, ನೀಲಕಂಠನೇ ನಿನ್ನ ಮಂಗಳಪ್ರದವಾದ ದರ್ಶನಕ್ಕೆ ಜನರು ಬಂದು ಸೇರುತ್ತಿದ್ದಾರೆ. ರಾತ್ರಿ ಹೊತ್ತು ಮುಗಿಯುತ್ತಿದೆ. ನಿದ್ರೆಯನ್ನು ಬಿಡು, ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಕಾವೇರಿಕಾಕನಕಯೂ ಮಿಲಿತಾ ಬಭೂವ

ಯತ್ರಾಸ್ತಿ ತಕ್ಷಕವನಂ ಪಿತೃಕಾನನಂ ಚ |

ತತ್ರಾಗತಾಃ ಕಲಯಿತುಂ ಪಿತೃಕರ್ಮ ಲೋಕಾಃ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಎಲ್ಲಿ ಕಾವೇರಿಯು ಕನಕೆಯೊಡನೆ ಸಂಗಮವಾಗಿರುವಳೋ, ಎಲ್ಲಿ ತಕ್ಷಕವನವೂ ಪ್ರೇತಾರಣ್ಯವೂ ಇರುತ್ತದೋ, ಆ ಸ್ಥಳಕ್ಕೆ ಜನರು ಪಿತೃಕರ್ಮವನ್ನು ಮಾಡುವುದಕ್ಕಾಗಿ ಬಂದಿರುವರು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಉತ್ತಿಷ್ಠ ಪಂಚಮುಖ ಪರ್ವತರಾಜಪುತ್ರೀ

ಸಂಮರ್ದಿತಾAಘ್ರೀ ಸರಸೀರುಹ ವಿಶ್ವಬಂಧೋ |

ಲೋಕಾಸ್ಸ÷್ವ ಕರ್ಮನಿರತಾ ಶಯನಂ ವಿಮುಂಚ

ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ||

ಐದು ಮೊಗದವನೆ, ಪರ್ವತರಾಜನ ಮಗಳಾದ ಪಾರ್ವತಿಯಿಂದ ನೀವಿಸಲ್ಪಟ್ಟ ಪಾದಕಮಲಗಳುಳ್ಳವನೇ, ವಿಶ್ವಬಂಧುವೇ, ಜನರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿರುವರು, ನಿದ್ದೆಯನ್ನು ಬಿಡು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಗಾಯಂತಿ ಕರ್ಣಮಧುರಂ ತವ ದಿವ್ಯವೃತ್ತಂ

ಹಸ್ತಾಬ್ಜಕAಕಣಝಣಜ್ಝಣತಾಲಬದ್ಧA |

ದದ್ನಸ್ಸುಮಂಥವಿದೌ ನಿರತಾ ರಮಣ್ಯೋ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಮೊಸರÀನ್ನು ಕಡೆಯುವ ಕೆಲಸದಲ್ಲಿ ನಿರತರಾಗಿರುವ ಮಹಿಳೆಯರು ನಿನ್ನ ದಿವ್ಯ ಚರಿತ್ರೆಯನ್ನು ಕಿವಿಗೆ ಇಂಪಾಗಿ ಹಾಡುತ್ತಿದ್ದಾರೆ. ತಮ್ಮ ಕರಕುಶಲಗಳಲ್ಲಿ ತೊಟ್ಟಿರುವ ಬಳೆಗಳ ಝಣ ಝಣ ಶಬ್ದವು ಆ ಹಾಡಿಗೆ ಸಂಬAಧಿಸಿದ ತಾಳದಂತೆ ಇದೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ವೇದಾಂತನAದನವಿಹಾರಿಮಯೂರ ಶರ್ಮ

ಕಾತ್ಯಾಯನೀಹೃದಯ ಪಂಕಜಚAಚರೀಕ |

ಲೋಕೇಷು ಪಾತಯ ದಯಾಮಸೃಣಾನ್ಕಟಾಕ್ಷಾನ್

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ವೇದಾAತವೆAಬ ನಂದನವನದಲ್ಲಿ ವಿಹರಿಸುವ ನವಿಲೇ, ಈಶ್ವರನೇ, ಪಾರ್ವತಿಯ ಹೃದಯಕಮಲದಲ್ಲಿ ವಿಹರಿಸುವ ಜೇನುನೊಣವೇ, ದಯಾಪೂರ್ಣವಾದ ಕಟಾಕ್ಷಗಳನ್ನು ಜನರ ಮೇಲೆ ಬೀಳಿಸು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ದೇವಾದಿದೇವಸುರಕಿನ್ನರಯಕ್ಷರಕ್ಷೆÆÃ

ಗಂಧರ್ವಗುಹ್ಯಕಮುಖೈರಭಿವAದಿತಾAಘ್ರೇ |

ಉತ್ತಿಷ್ಠ ಕಲ್ಪವಿಟಪಿನ್ನಮತಾಂ ಪುರಾರೇ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ದೇವರಿಗೆ ಅಧಿದೇವನಾದವನೇ, ಸುರ, ಕಿನ್ನರ, ಯಕ್ಷ ರಕ್ಷಸ್ಸು, ಗಂಧರ್ವ, ಗುಹ್ಯಕ ಮೊದಲಾದವರಿಂದ ಪೂಜಿಸಲ್ಪಟ್ಟ ಪಾದವುಳ್ಳವನೇ, ನಮಸ್ಕರಿಸುವವರಿಗೆ ಕಲ್ಪವೃಕ್ಷವೇ, ತ್ರಿಪುರಸಂಹಾರಕನೇ, ಏಳು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಲೋಕಾಃ ಕೃತಾಂಜಲಿಪುಟಾ ವಿಧಿವತ್ಪçಣಾಮಾನ್

ಕುರ್ವಂತಿ ನಾಮ ಹೃದಿ ತೇ ಶಿವದಂ ಸ್ಮರಂತಃ |

ತ್ವಾಮರ್ಥಯಂತಿ ಪರಿಪೂರಯಿತುಂ ಚ ಕಾಮಾನ್

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ಜನರು ಅಂಜಲಿಬದ್ಧರಾಗಿ ವಿಧಿಯುಕ್ತವಾಗಿ ನಿನ್ನ ಮಂಗಳಕರವಾದ ನಾಮಗಳನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ನಮಸ್ಕಾರಗಳನ್ನು ಮಾಡುತ್ತಿದ್ದಾರೆ. ಆ ಸಮಯದಲ್ಲಿ ತಮ್ಮ ಬಯಕೆಗಳನ್ನು ಪರಿಪೂರ್ಣಗೊಳಿಸುವುದಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಉತ್ತಿಷ್ಠ ದೀನದಲಿತೋದ್ಧರಣೈ ಕದೀಕ್ಷ

ಪ್ರೋತ್ತಿಷ್ಠ ರುಗ್ಣಜನರೋಗನಿರೋದದಕ್ಷಃ |

ಉತ್ತಿಷ್ಠ ಭಕ್ತಜನಕಾಮಿತಕಲ್ಪವೃಕ್ಷ

ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||

ದೀನದಲಿತರನ್ನು ಉದ್ಧಾರ ಮಾಡುವುದಕ್ಕೆ ಮುಖ್ಯವಾಗಿ ದೀಕ್ಷೆಯನ್ನು ತೊಟ್ಟವನೇ, ಏಳುರೋಗಪೀಡಿತರಾದ, ಜನರ ರೋಗಗಳನ್ನು ನಿವಾರಿಸು ವುದರಲ್ಲಿ ಸಮರ್ಥನೇ, ಎದ್ದೇಳು. ಭಕ್ತಜನರ ಇಷ್ಟಾರ್ಥಗಳನ್ನು ಕೊಡುವ ಕಲ್ಪವೃಕ್ಷವೇ, ಎದ್ದೇಳು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.

ಭವ್ಯಂ ಭಗಂಡಮಹಿತೇಶ್ವ ರಸು ಪ್ರಭಾತಂ

ಯೇಹರ್ಮುಖೇ ಪ್ರತಿದಿನಂ ಮನುಜಾಃ ಪಠಂತೀ

ವಿAದAತಿ ತೇ ಸಕಲವಾಂಛಿತ ಸಿದ್ಧಿಮಾಶು

ಜ್ಞಾನಂ ಚ ಮುಕ್ತಿಸುಲಭಂ ಪರಮಂ ಲಭಂತೇ ||

ಯಾವ ಮನುಷ್ಯನು ಪ್ರತಿದಿನವೂ ಬೆಳಿಗ್ಗೆ ಈ ಕ್ಷೇಮಪ್ರದವಾದ ಭಗಂಡೇಶ್ವರ ಸುಪ್ರಭಾತವನ್ನು ಪಠನ ಮಾಡುವರೋ, ಅವರು ಬಹು ಬೇಗನೆ ತಮ್ಮ ಎಲ್ಲಾ ಬಯಕೆಗಳ ಸಿದ್ಧಿಯನ್ನು ಹೊಂದುತ್ತಾರೆ. ಅಲ್ಲದೆ, ಉತ್ಕೃಷ್ಟವಾದ ಮೋಕ್ಷ ಪ್ರಾಪ್ತಿಗೆ ಸುಲಭವಾದ ಜ್ಞಾನವನ್ನು ಸಹ ಹೊಂದುತ್ತಾರೆ. (ಮುಗಿಯಿತು)

ಸಂಗ್ರಹ : ಜಿ. ರಾಜೇಂದ್ರ

ಚಿತ್ರ : ಸಂಪತ್‌ಕುಮಾರ್