ಕುಶಾಲನಗರ, ಡಿ. ೪: ಕುಶಾಲ ನಗರ ಪಟ್ಟಣದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ.೭೫.೪೪ ಲಕ್ಷ ನಿವ್ವಳ ಲಾಭಗಳಿಸಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಹೇಳಿದರು.
ಕುಶಾಲನಗರ ಬೈಪಾಸ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಸಂಘವು ೨೦೦೪ನೇ ಇಸವಿಯಲ್ಲಿ ಪ್ರಾರಂಭಗೊAಡಿದ್ದು, ಇದೀಗ ೧,೨೩೫ ಸದಸ್ಯರನ್ನು ಹೊಂದಿ ಪಾಲುಬಂಡವಾಳ ರೂ. ೩.೩೦ ಕೋಟಿಗಳನ್ನು ಸಂಗ್ರಹಿಸಿ ಕಳೆದ ಸಾಲಿಗಿಂತ ರೂ. ೧೬ ಲಕ್ಷಗಳಷ್ಟು ಹೆಚ್ಚಿಗೆ ಸಂಗ್ರಹಿಸಿದೆ.
ಸAಘವು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು ವರ್ಷದ ಅಂತ್ಯಕ್ಕೆ ಒಟ್ಟು ರೂ. ೪೨.೪೬ ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಿದೆ. ಸಂಘವು ಸ್ವೀಕರಿಸುತ್ತಿರುವ ನಿರಖು ಠೇವಣಿಗಳಿಗೆ ಶೇ. ೮ ರಷ್ಟು ಅಧಿಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ, ಸಹಕಾರ ಸಂಘಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಶೇ. ೦.೫೦ ಹೆಚ್ಚಿನ ಬಡ್ಡಿಯ ದರವನ್ನು ನೀಡಲಾಗುತ್ತಿದೆ.
ಸಂಘದಲ್ಲಿ ಕ್ಷೇಮ ನಿಧಿ ರೂ. ೧.೧೧ ಕೋಟಿಗಳಷ್ಟು, ಕಟ್ಟಡ ನಿಧಿ ೧.೪೦ ಕೋಟಿಗಳಷ್ಟು, ಮರಣ ನಿಧಿ ರೂ. ೧೬.೮೧ ಲಕ್ಷಗಳಷ್ಟು, ಸಾಲಗಾರರ ಮರಣೋತ್ತರ ಪರಿಹಾರ ನಿಧಿ ರೂ. ೧೮.೭೮ ಕೋಟಿ ಇದೆ.
ಸಂಘದಲ್ಲಿ ವ್ಯಾಪಾರಾಭಿವೃದ್ಧಿ ಮಾಸಿಕ ಕಂತಿನ ಸಾಲ, ಜಾಮೀನು ಮಧ್ಯಂತರ ಸಾಲ, ಪಿಗ್ಮಿ ಮೀರಳತೆ (ಓ.ಡಿ) ಸಾಲ, ವ್ಯಾಪಾರ ಮೀರಳತೆ ಸಾಲ, ಗೃಹ ನಿರ್ಮಾಣ ಸಾಲ, ಆಭರಣ ಸಾಲ, ವಾಹನ ಸಾಲ, ಮಹಿಳಾ ಚೇತನಾ ಗುಂಪು ಸಾಲ, ಅಭಯ ಗುಂಪು ಸಾಲ ಮತ್ತು ಠೇವಣಿಗಳ ಮೇಲಿನ ಸಾಲವನ್ನು ನೀಡುತ್ತಿದ್ದು. ಈ ಎಲ್ಲಾ ಸಾಲಗಳ ಮೂಲಕ ಸಂಘದಿAದ ರೂ. ೪೨.೭೦ ಕೋಟಿಗಳಷ್ಟು ಸಾಲವನ್ನು ವಿತರಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಅಭ್ಯುದಯಕ್ಕಾಗಿ ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಲು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ತಮ್ಮ ಕುಟುಂಬದ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯ ವಾಗುವ ರೀತಿಯಲ್ಲಿ ಮಹಿಳಾ ಚೇತನಾ ಸ್ವಸಹಾಯ ಗುಂಪು ಸಾಲ ಯೋಜನೆಯನ್ನು ಹಾಗೂ ಅಭಯ ಗುಂಪು ಸಾಲವನ್ನು ಪ್ರಾರಂಭಿಸಿದ್ದು, ಮಹಿಳೆಯರು ಖಾಸಗಿ ಹಣಕಾಸು ಸಂಸ್ಥೆಗಳಿAದ ಹೆಚ್ಚಿನ ಬಡ್ಡಿ ದರಗಳಿಗೆ ಸಾಲವನ್ನು ಪಡೆದು ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಶರವಣಕುಮಾರ್ ಹೇಳಿದರು. ಪ್ರತಿಯೊಬ್ಬ ಸದಸ್ಯರಿಗೆ ವೈಯುಕ್ತಿಕ ಜಾಮೀನಿನ ಆಧಾರದ ಮೇಲೆ ವ್ಯಾಪಾ ರಾಭಿವೃದ್ಧಿ ಮಾಸಿಕ ಕಂತಿನ ಸಾಲ ರೂ. ೪ ಲಕ್ಷ, ಜಾಮೀನು ಮಧ್ಯಂತರ ಸಾಲ ರೂ. ೨ ಲಕ್ಷ ಹಾಗೂ ಪಿಗ್ಮಿ ಸಾಮಾನ್ಯ ಸಾಲ ರೂ. ೧ ಲಕ್ಷಗಳನ್ನು ಸೇರಿಸಿ ಒಟ್ಟು ಒಬ್ಬ ಸದಸ್ಯನಿಗೆ ರೂ. ೭ ಲಕ್ಷ ಸಾಲ ವಿತರಿಸುತ್ತಿದ್ದು, ಈ ಸಾಲಗಳ ಜೊತೆಗೆ ಸದಸ್ಯರುಗಳಿಗೆ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಖರೀದಿ ಸಾಲ, ಚಿನ್ನಾಭರಣ ಖರೀದಿ, ಗೃಹ ಉಪಯೋಗಿ ವಸ್ತುಗಳ ಖರೀದಿ, ಗೃಹ ನಿರ್ಮಾಣ ಸಾಲ ನೀಡುತ್ತಿದ್ದು ಸದಸ್ಯರು ಮತ್ತು ಸದಸ್ಯೇತರರಿಗೆ ಚಿನ್ನಾ ಭರಣಗಳ ಈಡಿನ ಮೇಲೆ ಅಡಮಾನ ಸಾಲಗಳನ್ನು ಸಹ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲವನ್ನು ಪ್ರಾರಂಭಿಸಿದ್ದು, ದೇಶದ ಒಳಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ ಗಳಿಗೆ ಗರಿಷ್ಠ ರೂ.೨೦ ಲಕ್ಷಗಳಂತೆ, ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. ೩೦ ಲಕ್ಷಗಳವರೆಗೆ ಶೈಕ್ಷಣಿಕ ಸಾಲವನ್ನು ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು. ಈ ಸಾಲಿನಲ್ಲಿ ರೂ. ೧೯೭ ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, ಅನುತ್ವಾದಕ ಆಸ್ತಿಗಳಿಗೆ ರೂ. ೫೫.೮೧ ಲಕ್ಷ ಆದಾಯ ತೆರಿಗೆ, ರೂ. ೧೦.೨೮ ಲಕ್ಷ ಹಾಗೂ ಇತರ ಕಟ್ಟಡ ಮತ್ತು ಇತರ ಸವಕಳಿಗೆ ರೂ. ೧೩.೭೫ ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಸಂಘವು ರೂ. ೭೫.೪೪ ಲಕ್ಷಗಳಷ್ಟು ನಿವ್ವಳ ಲಾಭ ಗಳಿಸಿರುತ್ತದೆ. ಸಂಘವು ಕಳೆದ ೧೭ ವರ್ಷಗಳಿಂದಲೂ ಸತತ ವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ.
ರಾಷ್ಟಿçÃಯ ಹೆದ್ದಾರಿ ರಸ್ತೆಗೆ ಹೊಂದಿಕೊAಡAತೆ ೨೦ ಸೆಂಟು ಹಾಗೂ ಹಳೆಯ ಆಸ್ಪತ್ರೆ ಕಟ್ಟಡವನ್ನು ರೂ. ೨.೦೫ ಕೋಟಿ ನೀಡಿ ಖರೀದಿಸ ಲಾಗಿದ್ದು, ಈ ಜಾಗದಲ್ಲಿ ಹೈಟೆಕ್ ಹೆಲ್ತ್ ಸೆಂಟರ್ ಸ್ಥಾಪನೆ ಉದ್ದೇಶ ಹೊಂದ ಲಾಗಿದೆ ಎಂದರು. ಈ ಸಾಲಿನಲ್ಲಿ ಸದಸ್ಯರಿಗೆ ಶೇ. ೧೪.೫ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದರು. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ ೧೦ನೇ ತರಗತಿ, ದ್ವಿತೀಯ ಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಅಂತಿಮ ಸ್ನಾತಕೋತ್ತರ ಪದವಿ, ಡಿಪ್ಲೋಮ ಮತ್ತು ಇಂಜಿನಿಯರಿAಗ್, ವೈದ್ಯಕೀಯ ಪದವಿಯಲ್ಲಿ ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹು ಮಾನವನ್ನು ಕಳೆz