ನಾಪೋಕ್ಲು, ಡಿ. ೩: ನಗರದ ಮಾರುಕಟ್ಟೆ ಬಳಿಯಿಂದ ವೀರಾಜಪೇಟೆಗೆ ತೆರಳುವ ಪೆಟ್ರೋಲ್ ಬಂಕ್‌ವರೆಗಿನ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು, ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ವಾಹನಗಳಿಗೆ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಸೋಮವಾರದೊಳಗೆ ರಸ್ತೆಯನ್ನು ದುರಸ್ತಿಗೊಳಿಸದಿದ್ದಲ್ಲಿ ಸಂತೆ ದಿನವಾದ ಸೋಮವಾರ ನಗರದ ವಾಹನ ಚಾಲಕ ಮಾಲೀಕರ ಸಂಘ, ಇನ್ನಿತರ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ರಸ್ತೆ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಕೊಟ್ಟಮುಡಿ ತಿಳಿಸಿದ್ದಾರೆ. ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳ ಹಿಂದೆ ರಸ್ತೆ ಬಗ್ಗೆ ಪತ್ರಿಕೆ ಮುಖಾಂತರ ಸಂಬAಧಿಸಿದ ಇಲಾಖೆಯ ಗಮನ ಸೆಳೆದಾಗ ಗುಂಡಿಗಳಿಗೆ ಎಂಸ್ಯಾAಡ್, ಕಲ್ಲುಮರಳು ತುಂಬಿಸಿ ಕಳಪೆ ಕೆಲಸ ಮಾಡಿ ಗುಂಡಿ ಮುಚ್ಚಲಾಗಿತ್ತು. ಇದೀಗ ಮಳೆಗೆ ಮತ್ತೆ ರಸ್ತೆ ಹಾಳಾಗಿದೆ ಎಂದರು.

ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ನಗರದ ರಸ್ತೆಯಲ್ಲಿ ಆಟೋ ರಿಕ್ಷಾವಾಗಲಿ ಇತರೆ ವಾಹನಗಳನ್ನು ಓಡಿಸಲು ಅಸಾಧ್ಯ ವಾಗಿದೆ. ಇದನ್ನು ದುರಸ್ತಿಪಡಿಸದಿದ್ದಲ್ಲಿ ಪ್ರತಿಭಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ವಾಹನ ಚಾಲಕ ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಸಿ. ನಾಗರಾಜ್, ಸಹ ಕಾರ್ಯದರ್ಶಿ ಝಕ್ರೀಯ ಇದ್ದರು.