ನಾಪೋಕ್ಲು, ಡಿ. ೨: ಕಳೆದ ತಾ. ೨೭ ರಂದು ನಡೆದ ನಿಧಿಗಾಗಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಂಜಿಲ ವಯಕೋಲ್‌ನ ಅಶ್ರಫ್, ವಯಕೋಲ್ ರಿಯಾಜ್ ಮತ್ತು ವಯಕೋಲ್ ಶಿಹಾಬ್ ಎಂಬವರನ್ನು ಮುಂದಿನ ಐದು ವರ್ಷಗಳ ಕಾಲ ಜಮಾಅತ್‌ನಿಂದ ಮತ್ತು ಎಲ್ಲಾ ಅಧೀನ ಸಮಿತಿಗಳಿಂದ ಅಮಾನತು ಗೊಳಿಸಲಾಗಿದೆ ಎಂದು ಪಯನರಿ ಜಮಾಅತ್ ಮಾಜಿ ಕಾರ್ಯದರ್ಶಿ ಪಿ.ಎಂ.ಎ. ಅಜೀಜ್ ಮಾಸ್ಟರ್ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ರಾಜ್ಯದ ಮಂತ್ರವಾದಿಯೊಬ್ಬನ ಬಲೆಗೆ ಬಿದ್ದ ಈ ಮೇಲಿನ ಮೂವರು ನಿಧಿಯ ಆಸೆಗಾಗಿ ೧೭ ವರ್ಷ ಕೆಳಗಿನ ಪ್ರಾಯದ ಬಾಲಕನನ್ನು ಬಲಿ ತೆಗೆದುಕೊಳ್ಳಲು ಹುನ್ನಾರ ನಡೆಸಿದ್ದು ಅಪ್ರಾಪ್ತ ಬಾಲಕನನ್ನು ಅಪಹರಿಸಿ ನಿಗೂಢ ಸ್ಥಳದಲ್ಲಿರಿಸಿ ತಪ್ಪಿತಸ್ಥರಾಗಿದ್ದಾರೆ ಎಂದರು.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಯ್‌ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ, ಉಪಾಧ್ಯಕ್ಷ ಇಬೂ ಇವರುಗಳು ಮರಂದೋಡದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಆರೋಪಿಗಳೊಂದಿಗೆ ಎಮ್ಮೆಮಾಡುವಿನ ಜಮಾಅತ್ ಸದಸ್ಯ ಕೆ.ಎಂ. ಹಂಸ, ಪಡಿಯಾಣಿಯ ಚಕ್ಕೇರ ಉಬೈದು ಮತ್ತು ಬಶೀರ್ ಎಮ್ಮೆಮಾಡು ಇವರುಗಳು ಸಹ ಶಾಮೀಲಾಗಿದ್ದು ಇವರ ಮೇಲೂ ಎಮ್ಮೆಮಾಡು ಜಮಾಅತ್ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಈ ಸಂದರ್ಭ ಒತ್ತಾಯಿಸಿದರು. ಇಂತಹವರ ವಿರುದ್ಧ ಜಿಲ್ಲೆಯ ಎಲ್ಲಾ ಜಮಾಅತ್

(ಮೊದಲ ಪುಟದಿಂದ) ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ಹೇಳಿದರು. ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಹಿಂದಿನಿAದಲೇ ಸರಕಾರದ ವಕ್ಫ್ ಬೋರ್ಡ್ನಲ್ಲಿ ರಿಜಿಸ್ಟರ್ ಮಾಡಲಾದ ಬೈಲಾ ಪ್ರಕಾರ ಆಡಳಿತ ನಡೆಸುತ್ತಿದ್ದು ಈ ವಿಭಾಗದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಮಾದÀಕ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡದೇ ಉತ್ತಮವಾಗಿ ಕಾರ್ಯ ನಡೆಸುತ್ತಾ ಬಂದಿದೆ ಎಂದರು. ಈ ವಿಷಯಗಳ ಬಗ್ಗೆ ಜಿಲ್ಲಾ ಪೊಲೀಸರು ಸೂಕ್ತವಾದ ತನಿಖೆ ನಡೆಸಿದರೆ ಇನ್ನೂ ಹೆಚ್ಚಿನ ವಿಷಯ ಹೊರ ಬರಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪಯ್‌ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ ಮಕ್ಕಿ, ಉಪಾಧ್ಯಕ್ಷ ಕೆ.ಎ. ಇಬ್ರಾಹಿಂ, ಪುದುರೇ ಅಹಮ್ಮದ್ ಹಾಜಿ, ವಯಕೋಲ್ ಎ. ಉಸ್ಮಾನ್, ಕುಂಡAಡ ರಜಾಕ್, ವಯಕೋಲ್ ರಷೀದ್ ಉಪಸ್ಥಿತರಿದ್ದರು.

- ದುಗ್ಗಳ