ಗೋಣಿಕೊಪ್ಪ ವರದಿ, ಡಿ. ೩: ಆಹಾರ ಅಭದ್ರತೆ ನಿವಾರಣೆಯಲ್ಲಿ ರೈತರ ಪಾತ್ರ ಮಹತ್ವ ಪಡೆದುಕೊಂಡಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಭಾರ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಹೇಳಿದರು. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರಾಷ್ಟಿçÃಯ ಕೃಷಿ ಶಿಕ್ಷಣ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಸ್ವಾತಂತ್ರö್ಯಪೂರ್ವ ಇದ್ದ ಆಹಾರ ಕೊರತೆ ನೀಗಲು ಹಸಿರು ಕ್ರಾಂತಿ ನೆರವಾಗಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರು ಹಾಗೂ ವಿಜ್ಞಾನಿಗಳ ಜ್ಞಾನಶಕ್ತಿಯಿಂದ ಆಹಾರ ಉತ್ಪಾದನೆ ಹೆಚ್ಚಾಗಲು ಸಾಧ್ಯವಾಗಿದೆ. ಪರಿಣಾಮ ಸ್ವಾವಲಂಭಿಯಾಗಿ ಬದುಕು ಸಾಗಿಸಲು ಭಾರತ ಸನ್ನದ್ಧವಾಗಿದ್ದು, ಆಹಾರ ರಫ್ತು ಮಾಡುವಷ್ಟು ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಕೃಷಿಕರ ಮಕ್ಕಳು ಹೆಚ್ಚಾಗಿ ಕೃಷಿ ವಿಶ್ವವಿದ್ಯಾಲಯಗಳಿಗೆ ಸೇರುವಂತಾಗಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಶಿಕ್ಷಣ ಸಂದರ್ಭ ಉತ್ತಮ ಅಂಕ ಪಡೆಯುವ ಮೂಲಕ ಕೃಷಿ ಶಿಕ್ಷಣಕ್ಕೆ ಒಲವು ತೋರಬೇಕು ಎಂದು ಸಲಹೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಕೆ.ಎ. ಈಶ್ವರ ಅರಣ್ಯ ಮಹಾವಿದ್ಯಾಲಯದಲ್ಲಿ ಕೃಷಿ ಖೋಟಾದಲ್ಲಿ ಶಿಕ್ಷಣ ಪಡೆಯಲು ಸರ್ಕಾರ ನೀಡಿರುವ ಅವಕಾಶದ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಮತ್ತು ಕೃಷಿ, ತೋಟಗಾರಿಕಾ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ ನೀಡಿದರು. ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ರಮೇಶ್, ಬೋಧಕರಾದ ಅನಂದ್ರಿತ, ಚಂದನ ಇದ್ದರು.