ಗೋಣಿಕೊಪ್ಪ ವರದಿ, ಡಿ. ೩: ಲಯನ್ಸ್ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.

ವಕೀಲರಾದ ನೆಲ್ಲಮಕ್ಕಡ ಪ್ರತಿಷ್ಠಾ ಮಾದಯ್ಯ, ಕಂಜಿತAಡ ಅನಿತಾ ದೇವಯ್ಯ ಸಂವಿಧಾನದ ಮಹತ್ವ ತಿಳಿಸಿಕೊಟ್ಟರು. ದೇಶದ ಪ್ರತೀ ಪ್ರಜೆಗೆ ಇರುವ ಹಕ್ಕು, ಕರ್ತವ್ಯ ಪಾಲನೆ ಬಗ್ಗೆ ಸಲಹೆ ನೀಡಿದರು. ಉಪನ್ಯಾಸಕಿ ಹೇಮಾವತಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲ ಚಿಯಕ್‌ಪೂವಂಡ ಲತಾ, ಸಹಾಯಕ ಮುಖ್ಯಶಿಕ್ಷಕಿ ಕವಿತ ಇದ್ದರು.