ಸೋಮವಾರಪೇಟೆ,ಡಿ.೩: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಸರ್ಕಾರದ ವತಿಯಿಂದ ಗರಿಷ್ಠ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆAದು ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ರೈತ ಸಂಘದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟಕದ ಅಧ್ಯಕ್ಷ ಎಂ.ಬಿ.ಗಣೇಶ್, ಸಂಚಾಲಕಿ ಜಯಂತಿ ಅವರುಗಳ ನೇತೃತ್ವದಲ್ಲಿ ಪದಾಧಿಕಾರಿಗಳು, ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಒಂದು ದಶಕಗಳಿಂದ ಮುಂಗಾರು ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆಹಾನಿಯಾಗುತ್ತಿದೆ. ಕೆಲವರಿಗೆ ಒಂದೆರಡು ಸಾವಿರ ಬೆಳೆಹಾನಿ ಪರಿಹಾರ ಸಿಗುತ್ತಿದೆ. ಆಸ್ತಿ ದಾಖಲಾತಿ ಸಮಸ್ಯೆಯಿಂದ ಬಹುತೇಕ ಕೃಷಿಕರು ಸರ್ಕಾರದ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ದೂರಿದರು. ಈ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟು, ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ಅಧ್ಯಕ್ಷ ಗಣೇಶ್ ಹೇಳಿದರು.

ಅಕಾಲಿಕ ಮಳೆಯಿಂದ ಭತ್ತ ಹಾನಿಯಾಗಿದೆ. ಈಗ ಜೀವನೋಪಾಯಕ್ಕೆ ಸರ್ಕಾರದ ಪಡಿತರವನ್ನು ಅವಲಂಭಿಸಬೇಕಾಗಿದೆ. ಸಂಚಾರಿ ವಾಹನದಲ್ಲಿ ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಸೂರ್ಲಬ್ಬಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಡಿತರ ವಿತರಣೆ ಮಾಡುವುದನ್ನು ಮುಂದುವರಿಸಬೇಕು ಎಂದು ಜಯಂತಿ ಆಗ್ರಹಿಸಿದರು.

ಕಳೆದ ಎರಡು ವರ್ಷಗಳಿಂದ ಮಧ್ಯಾಹ್ನದ ಬಸ್ ಸಂಚಾರ ನಿಂತು ಹೋಗಿದೆ. ನಾಲ್ಕೆöÊದು ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಡಕಚೇರಿ ಸುಂಟಿಕೊಪ್ಪದಲ್ಲಿದೆ. ತಾಲೂಕು ಕಚೇರಿ ಕೆಲಸಗಳಿಗೆ ಸೋಮವಾರಪೇಟೆಗೆ ಹೋಗಬೇಕು. ಸೋಮವಾರಪೇಟೆಯಿಂದ ಸೂರ್ಲಬ್ಬಿಗೆ ಆಟೋ ದರ ೭೦೦ರೂ.ಗಳಿದೆ. ಮಾದಾಪುರಕ್ಕೆ ೩೦೦ ರೂ.ಗಳ ಬಾಡಿಗೆ ನೀಡಬೇಕಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕೃಷಿಕರು ನೊಂದಿದ್ದಾರೆ. ಕೂಡಲೆ ಸೌಕರ್ಯ ಒದಗಿಸಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು. ಕೃಷಿಕರಾದ ಕೆ.ಎಸ್.ಕಾರ್ಯಪ್ಪ, ಕಿರಣ್ ಕಾರ್ಯಪ್ಪ, ಕೆ.ಎಸ್.ಕುಶಾಲಪ್ಪ, ಎನ್.ಜಿ.ಪ್ರಕಾಶ್, ಸ್ತಿçÃಶಕ್ತಿ, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.