ನಾಪೋಕ್ಲು, ಡಿ. ೩ : ನಗರದಲ್ಲಿ ಸುಮಾರು ೧೫೦ ಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು ಪ್ರತಿಯೊಬ್ಬರು ಎನ್.ಪಿ.ಕೆ. ಸಂಖ್ಯೆಯನ್ನು ಹೊಂದಿರತಕ್ಕದ್ದು. ಎನ್.ಪಿ.ಕೆ. ಸಂಖ್ಯೆ ಇಲ್ಲದ ಆಟೋಗಳು ನಗರದಲ್ಲಿ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಠಾಣಾಧಿಕಾರಿ ಆರ್, ಕಿರಣ್ ಎಚ್ಚರಿಸಿದ್ದಾರೆ. ಇಂದು ನೂತನ ಎನ್.ಪಿ.ಕೆ. ನಂಬರನ್ನು ಆಟೋ ರಿಕ್ಷಾಗಳಿಗೆ ಅಳವಡಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಡ್ರೆöÊವಿಂಗ್ ಲೈಸನ್ಸ್ ಮತ್ತು ವಾಹನದ ದಾಖಲಾತಿಯನ್ನು ಮತ್ತು ಇನ್ಶೂರೆನ್ಸ್ ಹೊಂದಿರಬೇಕು. ದಾಖಲಾತಿ ಹೊಂದಿರದ ಆಟೋ ರಿಕ್ಷಾಗಳನ್ನು ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ನಗರದಲ್ಲಿ ಅನಾವಶ್ಯಕವಾಗಿ ಅಟೋಗಳು ಓಡಾಡುತ್ತಿರುವ ವಿಷಯ ಗಮನಕ್ಕೆ ಬಂದಿದ್ದು ಅಂತಹ ರಿಕ್ಷಾಗಳ ಮೇಲೆ ದಂಡ ವಿಧಿಸಿ ಕ್ರಮಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು,

ಈ ಸಂದರ್ಭ ವಾಹನ ಚಾಲಕ ಮತ್ತು ಮಾಲೀಕ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್, ಕಾರ್ಯದರ್ಶಿ ಜಕ್ರಿಯ, ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್, ಸಲಹಾ ಸಮಿತಿ ಸದಸ್ಯ ಡಿ.ಸದಾನಂದ, ಪೊಲೀಸ್ ಮುಖ್ಯಪೇದೆಗಳಾದ ರವಿಕುಮಾರ್, ಮಾಚಯ್ಯ, ಸಂಘದ ಸದಸ್ಯರು ಇದ್ದರು.