ಮಡಿಕೇರಿ, ಡಿ. ೨: ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಷ್ಟಿçÃಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ ವತಿಯಿಂದ (ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಉದ್ದಿಮೆ) ಮ್ಯಾನ್ಯೂಯಲ್ ಸ್ಕಾö್ಯವೆಂರ‍್ಸ್ ಸಮೀಕ್ಷೆ (ಕೈಯಿಂದ ಮಲ ಬಾಚುವವರ, ತಲೆ ಮೇಲೆ ಮಲ ಹೊರುವವರ ಸಮೀಕ್ಷೆಗೆ) ಶಿಬಿರ ನಡೆಯಲಿದೆ.

ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮ್ಯಾನ್ಯೂವಲ್ ಸ್ಕಾö್ಯವೆಂಜಿAಗ್ ಸಮೀಕ್ಷೆ ನಡೆಸುತ್ತಿದ್ದು, ೨೦೧೩ ಅಥವಾ ತದ ನಂತರ ಒಣ ಮಲ ಸ್ವಚ್ಛತೆ, ಶೌಚಾಲಯದಿಂದ ತೆರೆದ ಚರಂಡಿಗೆ ಬಿದ್ದಿರುವ ಮಲವನ್ನು ಬರಿ ಕೈನಿಂದ ಸ್ವಚ್ಛತೆ, ಶೌಚಾಲಯಕ್ಕೆ ಹೊಂದಿ ಕೊಂಡಿರುವ ಸಿಂಗಲ್ ಪಿಟ್‌ನ ಮ್ಯಾನ್ಯೂಯಲ್ (ಯಂತ್ರವನ್ನು ಉಪಯೋಗಿಸದೆ ಸ್ವಚ್ಛತೆ) ಈ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳು ಸಮೀಕ್ಷೆ ಪರಿಮಿತಿಗೆ ಒಳಪಡುತ್ತಾರೆ. ಈ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳು ತಾ. ೧೩, ೧೫ ಮತ್ತು ೧೬ ರಂದು ನಡೆಯುವ ಶಿಬಿರಕ್ಕೆ ದಾಖಲಾತಿಗಳೊಂದಿಗೆ ಹಾಜರಾಗಿ ನೋಂದಾಯಿಸಿಕೊಳ್ಳಬಹುದು.

ತಾ. ೧೩ ರಂದು ಮಡಿಕೇರಿ ನಗರಸಭೆ (ಟೌನ್‌ಹಾಲ್), ಮಹದೇವಪೇಟೆ ಎ.ವಿ ಸ್ಕೂಲ್, ತಾ. ೧೪ ರಂದು ಪಟ್ಟಣ ಪಂಚಾಯಿತಿ ಕುಶಾಲನಗರ ಅಂಬೇಡ್ಕರ್ ಭವನ, ಟೌನ್ ಕಾಲೋನಿ. ನಗರ ಕಾಳಮ್ಮ ಕಾಲೋನಿ, ಸಮುದಾಯ ಭವನದಲ್ಲಿ, ತಾ. ೧೫ ರಂದು ಪಟ್ಟಣ ಪಂಚಾಯಿತಿ ಸೋಮವಾರಪೇಟೆ ಲೋಡರ್ ಕಾಲೋನಿ, ಸಮುದಾಯ ಭವನ ಅಂಬೇಡ್ಕರ್ ಭವನದಲ್ಲಿ ಹಾಗೂ ತಾ. ೧೬ ರಂದು ಪಟ್ಟಣ ಪಂಚಾಯಿತಿ ವೀರಾಜಪೇಟೆ ಶಿವಕೇರಿ ಅಂಗನವಾಡಿ ಕೇಂದ್ರ ಉರ್ದು ಸ್ಕೂಲ್ ವಿಜಯನಗರ ಇಲ್ಲಿ ಆಯಾಯ ದಿನಗಳಂದು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಶಿಬಿರ ನಡೆಯಲಿದೆ.

ನೋಂದಣಿಗೆ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ/ ಬಿ.ಪಿ.ಎಲ್ ಕಾರ್ಡ್ ಪ್ರತಿ ತರುವುದು, ಹಿಂದೆ ಮ್ಯಾನ್ಯೂಯಲ್ ಸ್ಕ್ಯಾವೆಂಜಿAಗ್ ಮಾಡುತ್ತಿರುವ ಬಗ್ಗೆ ನೀವು ಅಥವಾ ನಿಮ್ಮ ಪ್ರತಿನಿಧಿ ಕ್ಲೆöÊಮ್ ಮಾಡಿರುವ ಬಗ್ಗೆ ದಾಖಲೆ, ನೀವು ಮ್ಯಾನ್ಯೂಯಲ್ ಸ್ಕ್ಯಾವೆಂಜಿAಗ್ ವೃತ್ತಿಯಲ್ಲಿ ತೊಡಗಿರುವ ಹಾಗೂ ಮಾಡಿರುವ ಬಗ್ಗೆ ಪ್ರಮಾಣ ಪತ್ರ ಈ ದಾಖಲಾತಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಮಡಿಕೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಸೌಮ್ಯ ಮೊ. ೯೬೨೦೩೮೩೯೬೩, ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮೊ. ೯೭೩೧೪೪೨೬೨೪, ಸೋಮವಾರಪೇಟೆ ಪ.ಪಂ. ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮೊ. ೯೪೪೮೮೪೪೨೪೯ ಹಾಗೂ ವೀರಾಜಪೇಟೆ ಪ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್ ೯೯೪೫೧೦೨೯೦೦ನ್ನು ಸಂರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪಿ. ಶ್ರೀನಿವಾಸ ತಿಳಿಸಿದ್ದಾರೆ.