(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಡಿ. ೨: ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ಪ್ರಸ್ತುತ ನಡೆಯಲಿರುವ ಚುನಾವಣೆಗೆ ದಿನಗಣನೆ ಆರಂಭಗೊAಡಿದ್ದು, ಈ ಬಾರಿಯ ಸ್ಪರ್ಧಾಕಣ ರಂಗೇರುತ್ತಿದೆ. ಸ್ಥಳೀಯ ಸಂಸ್ಥೆಗಳ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಾದ ಬಳಿಕ ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ೮ನೇ ಚುನಾವಣೆಯಾಗಿದೆ.
೧೯೮೭ರಲ್ಲಿ ಜಿಲ್ಲಾಪರಿಷತ್, ಮಂಡಲಪAಚಾಯತ್ ಎಂಬ ಪರಿಕಲ್ಪನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆ ಜಾರಿಗೆ ಬಂದಿದೆ. ಆರಂಭದಲ್ಲಿ ಮಂಡಲ ಪಂಚಾಯಿತಿ ಹಾಗೂ ಜಿಲ್ಲಾಪರಿಷತ್ ಎಂಬ ಎರಡು ಹಂತದ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
ಈ ಜಿಲ್ಲಾ ಪರಿಷತ್ ವ್ಯವಸ್ಥೆಗೆ ೧೯೯೨ರಲ್ಲಿ ಮತ್ತೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನು ಆಗಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಅವಧಿಯಲ್ಲಿ ಮಾಡಲಾಗಿದ್ದು, ಬಳಿಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿಗಳು ಎಂಬ ಆಡಳಿತ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ.
೧೯೮೮ರಲ್ಲಿ ಪ್ರಥಮ ಚುನಾವಣೆ
ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿAದ ರಾಜ್ಯವಿಧಾನ ಪರಿಷತ್ಗೆ ಮೊದಲ ಚುನಾವಣೆ ನಡೆದಿದ್ದು, ೧೯೮೮ರಲ್ಲಿ. ಆಗ ನಡೆದ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಸಿ.ಕೆ. ಕಾಳಪ್ಪ (ಚೌಡ್ಲು ಕಾಳಪ್ಪ) ಅಜ್ಜಿಕುಟ್ಟಿರ ಎನ್. ಸೋಮಯ್ಯ ಹಾಗೂ ಎಸ್.ಜಿ. ಮೇದಪ್ಪ ಸ್ಪರ್ಧಿಗಳಾಗಿದ್ದರು. ಮೊದಲ ಚುನಾವಣೆಯಲ್ಲಿ ಜಯಗಳಿಸಿ ಮೇಲ್ಮನೆ ಪ್ರವೇಶಿಸಿದವರು ಚೌಡ್ಲು ಕಾಳಪ್ಪ ಅವರು.
ಇದಾದ ಬಳಿಕ ೧೯೯೨ರಲ್ಲಿ ಎರಡನೆಯ ಚುನಾವಣೆ ನಡೆದಿದ್ದು, ಇದರಲ್ಲಿ ಎದುರಾಳಿಗಳಾಗಿದ್ದವರು ಅಜ್ಜಿಕುಟ್ಟೀರ ಎನ್. ಸೋಮಯ್ಯ ಹಾಗೂ ನಂಬುಡಮಾಡ ಕೆ. ಮಾಚಯ್ಯ ಅವರು. ಇದರಲ್ಲಿ ಜಯ ಸಾಧಿಸಿದ್ದು, ಎ.ಎನ್. ಸೋಮಯ್ಯ ಅವರು. ಇದಾದ ಬಳಿಕ ಸುಮಾರು ಎರಡೂವರೆ ವರ್ಷದ ಅಧಿಕಾರ ಪೂರ್ಣಗೊಂಡ ಸಂದರ್ಭ ಎ.ಎನ್. ಸೋಮಯ್ಯ ಅವರು ಅಕಾಲಿಕವಾಗಿ ವಿಧಿವಶರಾಗಿದ್ದರು. ಈ ಕಾರಣದಿಂದಾಗಿ ಮತ್ತೆ ಉಪಚುನಾವಣೆ ಎದುರಾಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದವರು ಎ.ಎನ್. ಸೋಮಯ್ಯ ಅವರ ಪುತ್ರ ಶಾಂತು ಅಪ್ಪಯ್ಯ, ಟಿ.ಜಾನ್ ಹಾಗೂ ಎಸ್.ಜಿ. ಮೇದಪ್ಪ ಅವರುಗಳಾಗಿದ್ದರು. ಆಗ ಬಲಿಷ್ಠವಾಗಿದ್ದ ಕಾಂಗ್ರೆಸ್ನಲ್ಲಿ ಟಿ.ಜಾನ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರುಣ್ ಮಾಚಯ್ಯ ಅವರುಗಳ ನಡುವೆ ಟಿಕೆಟ್ಗಾಗಿ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಬಳಿಕ ಪಕ್ಷದ ಪ್ರಮುಖರು ಹಿರಿತನದ ಆಧಾರದಲ್ಲಿ ಟಿ.ಜಾನ್ ಅವರಿಗೆ ಟಿಕೆಟ್ ಅಂತಿಮಗೊಳಿಸಿದ್ದು, ಟಿ.ಜಾನ್ ಚುನಾಯಿತರಾಗಿದ್ದರು. ಅರುಣ್ ಮಾಚಯ್ಯರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಭರವಸೆ ನೀಡಿದ್ದರಿಂದ ಅವರು ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದು ಟಿ.ಜಾನ್ ಅವರ ಪರ ಕೆಲಸ ಮಾಡಿದ್ದರು.
ಈ ಅವಧಿ ಪೂರ್ಣಗೊಂಡ ಬಳಿಕ ಎದುರಾದ ನಾಲ್ಕನೆಯ ಚುನಾವಣೆಯಲ್ಲಿ ಕಾಂಗ್ರೆಸ್ನಿAದ ಮತ್ತೆ ಟಿ.ಜಾನ್ ಅವರಿಗೇ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಸಿ.ಎಸ್. ಅರುಣ್ ಮಾಚಯ್ಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಇವರಿಬ್ಬರೊಂದಿಗೆ ಎಸ್.ಜಿ. ಮೇದಪ್ಪ ಅವರು ಮತ್ತೊಬ್ಬರಾಗಿ ಕಣದಲ್ಲಿದ್ದರು. ಭಾರೀ ಸ್ಪರ್ಧಾತ್ಮಕವಾಗಿ ನಡೆದ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ಸಾಧಿಸಿದ ಅರುಣ್ ಮಾಚಯ್ಯ ಅವರು ನಂತರದಲ್ಲಿ
(ಮೊದಲ ಪುಟದಿಂದ) ಜೆಡಿಎಸ್ನೊಂದಿಗೆ ಗುರುತಿಸಿ ಕೊಂಡರು. ಬಳಿಕ ಎದುರಾದ ವಿಧಾನಸಭಾ ಚುನಾವಣೆ ಸಂದರ್ಭ ಅರುಣ್ ಮಾಚಯ್ಯ ಸುಮಾರು ನಾಲ್ಕೂವರೆ ವರ್ಷದ ಅಧಿಕಾರ ಪೂರ್ಣಗೊಂಡಿದ್ದಾಗ ರಾಜೀನಾಮೆ ನೀಡಿ ವಿಧಾನಸಭೆಗೆ ಜೆಡಿಎಸ್ನಿಂದ ಸ್ಪರ್ಧಿಸಿದ್ದರು.
ಐದನೆಯ ಚುನಾವಣೆಯಲ್ಲಿ ಮತ್ತೆ ರಾಜಕೀಯದಲ್ಲಿ ಬದಲಾವಣೆಗಳಾಗಿತ್ತು. ಅರುಣ್ ಮಾಚಯ್ಯ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಕಾಂಗ್ರೆಸ್ನಿAದ ಬಿ.ಜಿ. ಮಿಟ್ಟು ಚಂಗಪ್ಪ ಹಾಗೂ ಬಿಜೆಪಿಯಿಂದ ಎಸ್.ಜಿ. ಮೇದಪ್ಪ ಅವರುಗಳು ನೇರ ಸ್ಪರ್ಧಿಗಳಾಗಿದ್ದರು. ಈ ಹಿಂದಿನ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಎಸ್.ಜಿ. ಮೇದಪ್ಪ ಅವರು ಈ ಚುನಾವಣೆಯಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿ ಮೇಲ್ಮನೆ ಪ್ರವೇಶಿಸಿದ್ದರು.
ಮತ್ತೆ ಟಿ.ಜಾನ್
ಜಿಲ್ಲೆ ಕಂಡ ೬ನೆಯ ವಿಧಾನಪರಿಷತ್ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಟಿ.ಜಾನ್ ಹಾಗೂ ಬಿಜೆಪಿಯಿಂದ ಎಸ್.ಜಿ. ಮೇದಪ್ಪ ಅವರು. ಈ ಚುನಾವಣೆಯಲ್ಲಿ ಮತ್ತೊಮ್ಮೆ ಟಿ.ಜಾನ್ ಚುನಾಯಿತರಾಗಿ ಎಸ್.ಜಿ. ಮೇದಪ್ಪ ಪರಾಭವಗೊಂಡರು.
ಕಳೆದ ಅವಧಿಯಲ್ಲಿ...
ಇದೀಗ ಮುಕ್ತಾಯಗೊಳ್ಳುತ್ತಿರುವ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆರು ವರ್ಷದ ಹಿಂದೆ ನಡೆದಿದ್ದ ಚುನಾವಣೆಯೂ ಕುತೂಹಲಕಾರಿಯಾಗಿತ್ತು. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಎಂ.ಪಿ. ಸುಜಾಕುಶಾಲಪ್ಪ ಅವರು ಕೊನೆಕ್ಷಣದಲ್ಲಿ ಕಾರಣಾಂತರದಿAದ ಈ ಅವಕಾಶ ಕಳೆದುಕೊಂಡಿದ್ದರು. ಈ ಸಂದರ್ಭ ಅಭ್ಯರ್ಥಿಯಾಗಿದ್ದು, ಎಂ.ಪಿ. ಸುನಿಲ್ ಸುಬ್ರಮಣಿ. ಎದುರಾಳಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಸ್. ಚಂದ್ರಮೌಳಿ ಅವರು. ಆಗ ಚುನಾಯಿತರಾಗಿದ್ದು, ಸುನಿಲ್ ಸುಬ್ರಮಣಿ ಎಂಬದು ಈ ತನಕದ ಚುನಾವಣೆಗಳ ಹಿನ್ನೋಟವಾಗಿದೆ.
ಇದೀಗ ೮ನೇ ಚುನಾವಣೆ
ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್ಗೆ ಪ್ರಸ್ತುತ ನಡೆಯುತ್ತಿರುವದು ೮ನೆಯ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಗಳಾಗಿರುವದು ಬಿಜೆಪಿಯಿಂದ ಎಂ.ಪಿ. ಸುಜಾ ಕುಶಾಲಪ್ಪ ಹಾಗೂ ಕಾಂಗ್ರೆಸ್ನಿAದ ಡಾ. ಮಂಥರ್ಗೌಡ ಅವರುಗಳು. ಡಿಸೆಂಬರ್ ೧೦ ರಂದು ಚುನಾವಣೆ ನಿಗದಿಯಾಗಿದ್ದು, ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಈ ಬಾರಿ ಜಯಸಾಧಿಸಿ ಮೇಲ್ಮನೆ ಪ್ರವೇಶಿಸುವವರು ಯಾರು? ಎಂಬದನ್ನು ಕಾದುನೋಡಬೇಕಿದೆ.