(ಪ್ರಜ್ವಲ್ ಜಿ.ಆರ್.)

ಮಡಿಕೇರಿ, ಡಿ.೨: ಕೋವಿಡ್ ಸಂದರ್ಭ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದ ೫೬ ಗ್ರೂಪ್-ಡಿ ಸಿಬ್ಬಂದಿಗಳನ್ನು ಹಠಾತ್ತನೆ ಸೇವೆಯಿಂದ ವಜಾಗೊಳಿಸಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆದೇಶ ಹೊರಡಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿವೆ ಎಂಬ ಏಕಮಾತ್ರ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಕೋವಿಡ್ ಸೋಂಕಿನ ಜೀವಭಯ ವಿಲ್ಲದೆ, ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ಆತ್ಮೀಯವಾಗಿ ಕಾಳಜಿ ತೋರಿಸಿ ವಿಚಾರಣೆ ಮಾಡುತ್ತಿದ್ದವರು ಇದೀಗ ಹೊಟ್ಟೆಪಾಡಿಗಾಗಿ ಕಾಯಕ ಅರಸುವ ಪರಿಸ್ಥಿತಿ ಬಂದೊದಗಿದೆ.

ಕಳೆದ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಕೋವಿಡ್ ಭೀತಿ ಹೆಚ್ಚುತ್ತಿದ್ದ ಸಂದರ್ಭ ತಾತ್ಕಾಲಿಕವಾಗಿ ಶುಶ್ರೂಷಕಿಯರು ಸೇರಿದಂತೆ ಗ್ರೂಪ್-ಡಿ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜನೆಗೊಳಿಸಲಾಗಿತ್ತು. ಮೊದಲಿಗೆ ೩ ತಿಂಗಳುಗಳಿಗೆ ನಿಯೋಜನೆಗೊಳಿಸಲಾಗಿತ್ತಾದರೂ ಕೋವಿಡ್ ಪ್ರಕರಣಗಳ ಏರಿಕೆ ಯಿಂದಾಗಿ ಮತ್ತೆ ೩ ತಿಂಗಳುಗಳಿಗೆ ಅವಧಿ ವಿಸ್ತರಿಸಲಾಯಿತು. ಕೊರೊನಾ ಮತ್ತಷ್ಟು ಗಂಭೀರತೆ ಪಡೆಯಲಾ ರಂಭಿಸುತ್ತಿದ್ದAತೆ ೬,೭ ತಿಂಗಳುಗಳ ಹಿಂದೆ ಮತ್ತೆ ಕೆಲವರನ್ನು ಕೆಲಸಕ್ಕೆ ನಿಯೋಜನೆ ಮಾಡಲಾಯಿತು.

ಇದೀಗ ಹೊಸ ತಳಿಯ ‘ಓಮಿಕ್ರಾನ್’ ಹೆಸರಿನ ಸೋಂಕಿನ ಭಯ ಹೆಚ್ಚುತ್ತಿದ್ದಂತೆಯೇ, ಮತ್ತಷ್ಟು ಸಿಬ್ಬಂದಿಗಳನ್ನು ನಿಯೋಜಿಸುವ ಬದಲು, ಇದ್ದವರನ್ನೇ ಯಾವುದೇ ಮುನ್ಸೂಚನೆಯಿಲ್ಲದೆ ಸೇವೆಯಿಂದ ವಜಾಗೊಳಿಸಲಾಗಿದೆ.

(ಮೊದಲ ಪುಟದಿಂದ) ಇದೀಗ ಕೇವಲ ಸುಮಾರು ೩೬ ಮಂದಿ ಮಾತ್ರ ಸೇವೆಯಲ್ಲಿರುವುದಾಗಿ ತಿಳಿದು ಬಂದಿದೆ.

ಪ್ರತಿ ದಿನ ಆಸ್ಪತ್ರೆಗೆ ಉತ್ಸಾಹದಿಂದ ಕಾರ್ಯಕ್ಕೆ ತೆರಳುತ್ತಿದ್ದ ಸಿಬ್ಬಂದಿಯೊಬ್ಬರು ಆಸ್ಪತ್ರೆಯ ನೋಟಿಸ್ ಬೋರ್ಡ್ ನೋಡಿ ಅಚ್ಚರಿಪಟ್ಟರು. ಸೇವೆಗೆಂದು ಸಮವಸ್ತç ಧರಿಸಿ ಆಸ್ಪತ್ರೆಗೆ ತೆರಳಿದ ಬಳಿಕವಷ್ಟೆ ತಮ್ಮ ಸೇವೆಯೇ ರದ್ದಾಗಿರುವುದಾಗಿ ತಿಳಿದುಬಂತು ಎಂದು ಅವರು ಕಣ್ಣೀರಿಟ್ಟು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ಹಂಚಿಕೊAಡಿದ್ದಾರೆ.

ರೋಗಿಗಳನ್ನು ಗಾಲಿ ಖುರ್ಚಿಯಲ್ಲಿ ಸಾಗಿಸುವುದಾಗಲಿ, ಆಸ್ಪತ್ರೆಯ ಶುಚಿತ್ವ ಕಾಪಾಡುವುದಾಗಲಿ, ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ ಅಂತಹವರ ದೇಹವನ್ನು ಪಿ.ಪಿ.ಇ ಕಿಟ್‌ಗಳ ಮೂಲಕ ಸುತ್ತುವುದಾಗಲಿ, ಎಲ್ಲವನ್ನೂ ಸುಸೂತ್ರವಾಗಿ ನಡೆಸುತ್ತಿದ್ದ ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸುವ ಅಗತ್ಯವಿದೆಯಾದರೂ, ಕನಿಷ್ಟ ಇಲ್ಲಿ ಕೆಲಸ ಮಾಡಿದ್ದೇವೆ ಎಂಬ ಪ್ರಮಾಣ ಪತ್ರ ಕೂಡ ನೀಡದೆ ಮನೆಗೆ ಕಳುಹಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಶೂಶ್ರೂಷಕಿಯರಿಗೂ ಸರಕಾರದಲ್ಲಿ ದುಡ್ಡಿಲ್ಲ ಎಂಬ ಕಾರಣಕ್ಕಾಗಿ ಇದೇ ಪರಿಸ್ಥಿತಿ ಎದುರಾಗಿತ್ತು. ಇದೀಗ ವಾರಿರ‍್ಸ್ ಪಟ್ಟಿಯ ಮತ್ತೊಂದು ಹುದ್ದೆಯವರಿಗೂ ಇದೇ ಗತಿಯಾಗಿದ್ದು, ಕೇವಲ ಜನಪ್ರತಿನಿಧಿಗಳ, ರಾಜಕಾರಣಿಗಳ ಭಾಷಣಗಳಲ್ಲಿ ಮಾತ್ರ ಇವರುಗಳು ‘ವಾರಿರ‍್ಸ್’ ಆಗಿ ಉಳಿದಿದ್ದಾರೆ.