ಕೂಡಿಗೆ, ಡಿ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗಡ್ಡಹಳ್ಳಿ ಮತ್ತು ಕೊಪ್ಪಲು ಕೋಟೆ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯಕ್ಕೆ ಸೇರಿದ ಕೆರೆಯನ್ನು ದುರಸ್ತಿಪಡಿಸಿ ಮತ್ತು ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿಕೊಂಡಬೇಕೆAದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಂಡಿನಮ್ಮ ಕೆರೆಯು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶವಾಗಿದ್ದು, ಹಾರಂಗಿ ಮುಖ್ಯ ನಾಲೆಯ ನೀರು ಸಂಗ್ರಹವಾಗಿ ಕೆಳಗಿನ ಪ್ರದೇಶದ ನೂರಾರು ಎಕರೆಗಳಷ್ಟು ಪ್ರದೇಶಗಳಿಗೆ ನೀರಿನ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಕೆಲವ್ಯಕ್ತಿಗಳು ದಂಡಿನಮ್ಮ ಕೆರೆಯ ಭಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಾರಂಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲಾಖೆಯ ವತಿಯಿಂದ ದುರಸ್ತಿಪಡಿಸುವಂತೆ ಶ್ರೀ ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಸೇರಿದಂತೆ ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.

ದೇವಾಲಯ ಸಮಿತಿಯ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕೆರೆಯ ಸರ್ವೆ ಕಾರ್ಯಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಸಂಬAಧಿಸಿದ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ದೇವಾಲಯಕ್ಕೆ ಹೊಂದಿಕೊAಡಿರುವ ದಂಡಿನಮ್ಮ ಕೆರೆ ಜಾಗವನ್ನು ಗುರುತಿಸಿ ತೆರವುಗೊಳಿಸಿಕೊಡಬೇಕೆಂದು ಆಗ್ರಹಿಸಲಾಗಿದೆ.