ಮಡಿಕೇರಿ, ಡಿ. ೧: ವೀರಾಜಪೇಟೆಯಿಂದ ಗೋಣಿಕೊಪ್ಪಲಿಗೆ ಸಾಗುವಾಗ ೪೬ನೇ ಮೈಲಿಗಲ್ಲುವಿನ ಸಮೀಪ ಕೇಳಪಂಡ - ಚಪ್ಪಂಡ ಕುಟುಂಬಗಳಿಗೆ ಹೋಗುವ ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ಪಾದಚಾರಿಗಳು ಹಾಗೂ ವಾಹನ ಚಲಾಯಿಸು ವವರು ಜೀವ ಭಯದಿಂದ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಕೋಪ ಯೋಗಿ ಇಲಾಖೆಗೆ ಅನೇಕ ಬಾರಿ ತಿಳಿಸಿದ್ದರೂ ಇಲಾಖಾ ಅಧಿಕಾರಿ ಗಳು ಅನೇಕರು ದಿನಂಪ್ರತಿ ಹತ್ತು ಹಲವು ಬಾರಿ ಹೈವೇ ಮುಖಾಂತರ ಸಂಚರಿಸಿದರೂ ಯಾರೊಬ್ಬರು ತಲೆಕೆಡಿಸಿ ಕೊಂಡAತಿಲ್ಲ. ಲೋಕೋಪಯೋಗಿ ಇಲಾಖೆಗೆ ತಿಳಿಸಿದರೆ ಅದನ್ನು ರಸ್ತೆ ಅಗಲೀಕರಣವಾದಾಗ ಸರಿಪಡಿಸುವುದಾಗಿ ಭರವಸೆ ನೀಡುತ್ತಾರೆ. ಪೊಳ್ಳು ಭರವಸೆ ನೀಡುತ್ತಾ ೩೦ ರಿಂದ ೪೦ ವರ್ಷಗಳೇ ಕಳೆದರೂ ರಸ್ತೆಯ ಪಕ್ಕದಲ್ಲಿ ಕಾಲ್ನಡಿಗೆಗೂ ಜಾಗವಿಲ್ಲದಂತಾಗಿದೆ. ಕುಟುಂಬ ರಸ್ತೆಯಿಂದ ಹೈವೇ ರಸ್ತೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಹೈವೇಗಳಲ್ಲಿ ಹಾದುಹೋಗುವ ಹಲವು ವಾಹನಗಳು ರಸ್ತೆಯ ಪಕ್ಕದಲ್ಲಿನ ಮೋರಿಯೊಳಗೆ ಬಿದ್ದ ಪ್ರಸಂಗಗಳು ಸಂಭವಿಸಿವೆ. ಇತ್ತೀಚೆಗೆ ಹೈವೇ ರಸ್ತೆಯಲ್ಲಿನ ಮೋರಿ ಕುಸಿತವಾಗಿದ್ದು, ಪೊಲೀಸ್ ಇಲಾಖೆಯಿಂದ ಸುರಕ್ಷತೆಗಾಗಿ ಬ್ಯಾರಿಕೇಡ್ ಇಡಲಾಗಿದೆ. ಇದೀಗ ಹೈವೇ ರಸ್ತೆ ಸಂಚಾರ ಬಹಳ ಇಕ್ಕಟ್ಟಿಗೆ ಸಿಲುಕಿದೆ.
ಇನ್ನಾದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಾಗುವ ಹಾನಿಗಳಿಗೆ ಇಲಾಖೆ ನೇರ ಹೊಣೆಯಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.