ಮಡಿಕೇರಿ, ಡಿ. ೧: ಪುಣ್ಯಕ್ಷೇತ್ರ ಶ್ರೀ ತಲಕಾವೇರಿಯ ಮಹಾದ್ವಾರದಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದ ಮೂವರು ಯುವತಿಯರು ಇದು ಧಾರ್ಮಿಕ ಕೇಂದ್ರವೆAಬದನ್ನು ನಿರ್ಲಕ್ಷಿಸಿ ಹೆಬ್ಬಾಗಿಲಿನಲ್ಲಿ ನರ್ತನ ಮಾಡಿ ಈ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ರೀಲ್ ಆಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಥಳೀಯ ಭಕ್ತಾದಿಗಳಿಂದ ತೀವ್ರ ವಿರೋಧವೂ ವ್ಯಕ್ತಗೊಂಡಿದ್ದು, ಇದು ವಿವಾದಕ್ಕೆ ಎಡೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೇ ಇದಕ್ಕೆ ಆಕ್ಷೇಪ ವ್ಯಕ್ತವಾಗಿ ಯುವತಿಯರು ಕ್ಷಮೆಯಾಚಿಸುವಂತೆ ಹಾಗೂ ವೀಡಿಯೋ ಡಿಲೀಟ್ ಮಾಡುವಂತೆಯೂ ಒತ್ತಾಯ ಕೇಳಿಬಂದಿತ್ತು. ಇದನ್ನು ಖಂಡಿಸಿದ್ದ ಅಖಿಲ ಕೊಡವ ಸಮಾಜ ಯೂತ್‌ವಿಂಗ್ ಯುವತಿಯರು ತಕ್ಷಣ ಕ್ಷಮೆಕೇಳಬೇಕು. ಇಲ್ಲದಿದ್ದಲ್ಲಿ ಪೊಲೀಸ್ ದೂರು ದಾಖಲಿಸುವದಾಗಿಯೂ ಎಚ್ಚರಿಸಿತ್ತು. ಅಲ್ಲದೆ ಯುವತಿಯರನ್ನು ಪತ್ತೆ ಹಚ್ಚಿ ಅವರಿಗೂ ನೇರವಾಗಿ ಈ ಬಗ್ಗೆ ಸೂಚಿಸಲಾಗಿತ್ತು.
ಇದೀಗ ಮೂವರು ಯುವತಿಯರಾದ ೨೦೨೧ರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆ ವಿಜೇತೆ ಬೃಂದಾ ಪ್ರಭಾಕರ್, ಮೈತ್ರಿ ಕುಮಾರ್ ಹಾಗೂ ರಾಶಿರಾವ್ ಕ್ಷಮೆಯಾಚಿಸಿದ್ದಾರೆ. ತಿಳುವಳಿಕೆ ಇಲ್ಲದೆ ನಾವುಗಳು ‘ಡ್ಯಾನ್ಸ್’ ವೀಡಿಯೋ ಮಾಡಿದ್ದೆವು. ಇದರಿಂದ ಕೊಡವರು, ಕೊಡವ ಸಮಾಜ ಹಾಗೂ ಕಾವೇರಿ ಭಕ್ತರಿಗೆ ನೋವಾಗಿದ್ದಲ್ಲಿ ಕ್ಷಮೆ ಕೇಳುವುದಾಗಿಯೂ ಹಾಗೂ ಕಾವೇರಿ ಮಾತೆಯ ಬಗ್ಗೆ ಅಪಾರ ಗೌರವ ಇದ್ದು ತಾಯಿಯಲ್ಲೂ ಕ್ಷಮೆಕೇಳುವದಾಗಿ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ಮಾಡುವದಿಲ್ಲ ಎಂಬ ಸಂದೇಶದೊAದಿಗೆ ಇದಕ್ಕೆ ಇತಿಶ್ರೀ ಹೇಳಿದ್ದಾರೆ.