ಮಡಿಕೇರಿ, ಡಿ. ೧: ಭಾರತೀಯ ನೌಕಾದಳದ ವೈಸ್ ಅಡ್ಮಿರಲ್ ಬಿಸ್ವಜಿತ್‌ದಾಸ್ ಗುಪ್ತ ಅವರು ತಾ. ೧೨ ಹಾಗೂ ೧೩ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ನೌಕಾದಳದಿಂದ ನೀಡಿರುವ ಯುದ್ಧ ನೌಕೆ ಮತ್ತಿತರ ಮಾದರಿಗಳ ಉದ್ಘಾಟನೆ ಸಮಾರಂಭಕ್ಕೆ ಇವರು ಆಗಮಿಸುತ್ತಿದ್ದಾರೆ. ಕೊಡಗಿನವರೇ ಆದ ರಿಯರ್ ಅಡ್ಮಿರಲ್ ಐಚೆಟ್ಟಿರ ಬಿ. ಉತ್ತಯ್ಯ ಹಾಗೂ ಈಸ್ಟರ್ನ್ ನೇವಲ್ ಕಮಾಂಡ್‌ನ ಫ್ಲಾö್ಯಗ್ ಆಫೀಸರ್ ಕಮಾಂಡಿAಗ್ ಇನ್ ಚೀಪ್ ಬಿಸ್ವಜಿತ್‌ದಾಸ್ ಗುಪ್ತಾ ಭೇಟಿ ನೀಡಲಿದ್ದಾರೆ.

ತಾ.೧೨ರಂದು ಬೆಳಿಗ್ಗೆ ೮.೩೦ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ನೌಕಾಪಡೆಯ ವಿಮಾನದ ಮೂಲಕ ಇವರುಗಳು ಆಗಮಿಸಲಿದ್ದಾರೆ. ನಂತರ ಅಲ್ಲಿಂದ ಹೊರಟು ೧೦ ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ತಲುಪಲಿದ್ದಾರೆ. ೧೦.೪೫ಕ್ಕೆ ಮಡಿಕೇರಿ ಗಾಲ್ಫ್ ಕೋರ್ಸ್ನ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಲಿದ್ದಾರೆ.

ಖಾಸಗಿ ರೆಸಾರ್ಟ್ನಲ್ಲಿ ಭೋಜನದ ನಂತರ ಗಾಲ್ಫ್ ಆಡಲಿದ್ದಾರೆ. ಮರುದಿನ ಬೆಳಿಗ್ಗೆ ೧೧ ಗಂಟೆಗೆ ‘ಸನ್ನಿಸೈಡ್’ಗೆ ಭೇಟಿ ನೀಡಿ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ೧೧.೧೫ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಹಾಗೂ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ’ನ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ೧೧.೪೫ಕ್ಕೆ ಯುದ್ಧ ನೌಕೆಯ ಮಾದರಿ ಅನಾವಣರಗೊಳ್ಳಲಿದೆ.