ಮಡಿಕೇರಿ, ನ. ೩೦: ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಗೌರವ ಖಜಾಂಚಿ ಕೋಡಿ ಚಂದ್ರಶೇಖರ್ ಅವರ ಅಕಾಲಿಕ ನಿಧನದ ಹಿನ್ನೆಲೆ ಸಮಿತಿ ವತಿಯಿಂದ ಸಂತಾಪ ಸಭೆ ನಡೆಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮತ್ತಿತರರು ಕೋಡಿ ಚಂದ್ರಶೇಖರ್ ಅವರ ಕಾರ್ಯವೈಖರಿ ಮತ್ತು ಸಮಾಜಮುಖಿ ಚಿಂತನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಉಪಾಧ್ಯಕ್ಷ ಮುದ್ದಯ್ಯ, ಪ್ರಮುಖರಾದ ಕೆ.ಟಿ. ಬೇಬಿಮ್ಯಾಥ್ಯು, ಅಂಬೆಕಲ್ಲು ನವೀನ್, ಲಿಯಾಕತ್ ಆಲಿ, ಚುಮ್ಮಿ ದೇವಯ್ಯ, ಪ್ರೇಮಾ ಕೃಷ್ಣಪ್ಪ, ಎಂ.ಇ. ಮೊಹಿದ್ದೀನ್, ವಿಲ್ಫೆçಡ್ ಕ್ರಾಸ್ತಾ, ಎಂ.ಎA. ಶರೀಫ್, ಉಮೇಶ್ ಭಟ್ ಸೇರಿದಂತೆ ಸಭೆಯಲ್ಲಿದ್ದವರು ಮೌನಾಚರಣೆಯ ಮೂಲಕ ಕೋಡಿ ಚಂದ್ರಶೇಖರ್ ಅವರಿಗೆ ಸಂತಾಪ ಸೂಚಿಸಿದರು.