ಪ್ರತಿವರ್ಷ ಡಿಸೆಂಬರ್ ಒಂದರAದು ವಿಶ್ವದಾದ್ಯಂತ ಏಡ್ಸ್ ದಿನವನ್ನು ಆಚರಿಸುವರು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂö್ಯ.ಹೆಚ್.ಓ.) ಏಡ್ಸ್ ರೋಗದ ಸೋಂಕು ತಗುಲಿದ ಲಕ್ಷಗಟ್ಟಲೆ ಜನರನ್ನು ಗುರುತಿಸಿದೆ. ಏಡ್ಸ್ ದಿನಾಚರಣೆಯ ಮೂಲಕ ಜನ ಸಮುದಾಯದಲ್ಲಿ ಜಾಗೃತಿ ಉಂಟು ಮಾಡು ವುದು, ಅರಿವು ಮೂಡಿಸು ವುದು ದಿನಾಚರಣೆಯ ಮುಖ್ಯ ಉದ್ದೇಶ. ಸದ್ಯದ ಪರಿಸ್ಥಿತಿಯಲ್ಲಿ ಏಡ್ಸ್ ನಿಯಂತ್ರಣಕ್ಕೆ ಯಾವುದೇ ಚಿಕಿತ್ಸೆ ಇಲ್ಲವಾದರೂ ಜನರ ಲೈಂಗಿಕ ನಡವಳಿಕೆಗಳ ಬದಲಾವಣೆಗಳಿಂದ ಇದು ಹರಡದಂತೆ ತಡೆಯಬಹುದು.

ಏಡ್ಸ್ ಎಂದರೇನು ?

ಏಡ್ಸ್ ಎದರೆ ಅಕ್ವೆöÊರ್ಡ್ ಇಮ್ಯೂನೊ ಡಿಫಿಷಿಯನ್ಸ್ ಸಿಂಡ್ರೋ. ಅಂದರೆ ಆರ್ಜಿತ ವಿರೋಧ ಶಕ್ತಿ ಕುಂದುವಿಕೆಯ ಲಕ್ಷಣ. ರೋಗ ನಿರೋಧಕ ಶಕ್ತಿ ಸಹಜವಾಗಿ ನಮ್ಮ ದೇಹದಲ್ಲಿರುತ್ತದೆ. ಆದರೆ ಈ ಶಕ್ತಿಯನ್ನೇ ದುರ್ಬಲಗೊಳಿಸುವ ಹೆಚ್.ಐ. (ಹ್ಯೂಮನ್ ಇಮ್ಯೂನೊ ಡಿಫಿಷಿಯನ್ಸಿ) ವೈರಸ್ ದೇಹದೊಳಗೆ ಹೊಕ್ಕರೆ ಶರೀರ ಎಲ್ಲಾ ಬಗೆಯ ಸೋಂಕು ಹಾಗೂ ಕಾಯಿಲೆಗಳಿಗೂ ಸುಲಭವಾಗಿ ತುತ್ತಾಗುತ್ತದೆ. ಈ ಸ್ಥಿತಿಗೆ ವೈದ್ಯರು ಏಡ್ಸ್ ಎಂದು ಕರೆದಿದ್ದಾರೆ. ಏಡ್ಸ್ ಉಂಟುಮಾಡುವ ವೈರಸ್‌ಗೆ ಹೆಚ್.ಐ.ವಿ. ಎಂದು ಹೆಸರು.

ಹೆಚ್.ಐ.ವಿ. ವಿಷಾಣುಗಳು ದೇಹದೊಳಗೆ ಹೊಕ್ಕರೆ ಬಿಳಿ ರಕ್ತಕಣಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಊನಗೊಳಿಸಿ ಇಡೀ ರಕ್ಷಣಾ ವ್ಯವಸ್ಥೆಯನ್ನೇ ನಾಶ ಮಾಡುತ್ತವೆ. ಬಿಳಿ ರಕ್ತಕಣಗಳು ಹೆಚ್ಚು ಹೆಚ್ಚಾಗಿ ನಾಶವಾದಂತೆ ನಮ್ಮ ಶರೀರದಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯು ಕುಂದುವುದು.

ಏಡ್ಸ್ ಬಗ್ಗೆ ಮಾಹಿತಿ ನೀಡುವಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಾಟಕ, ಹಾಡು, ಸಂಗೀತ, ಸೂತ್ರ ಬೊಂಬೆಯಾಟ ಮೊದಲಾದ ಕಲಾ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಂಪರ್ಕ ಮಾಧ್ಯಮಗಳನ್ನು ಇನ್ನೂ ಹೆಚ್ಚು ಉಪಯೋಗಿಸಿಕೊಳ್ಳಬಹುದಾಗಿದೆ. ಕಥೆ, ನಾಟಕ, ಮೂಲಕವು ಲೈಂಗಿಕ ರೋಗ ಮತ್ತು ಹೆಚ್.ಐ.ವಿ. ಸೋಂಕುಗಳ ತೀವ್ರತೆ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿದೆ. ಜಾಗೃತಿ ಜಾಥಾಗಳು ಪರಿಣಾಮಕಾರಿ. ಚಲನಚಿತ್ರಗಳನ್ನು ರೂಪಿಸಬಹುದು.

ಭಿತ್ತಿಪತ್ರಗಳು, ಘೋಷಣಾ ಮಾದರಿಯ ಚಿತ್ರ ಸಹಿತ ಭಿತ್ತಿಪತ್ರಗಳು ಜನರ ಮನಸ್ಸಿಗೆ ತಕ್ಷಣ ನಾಟುತ್ತದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜನಸಂದಣಿ ಇರುವೆಡೆ ಏಡ್ಸ್ ಕುರಿತ ಸಣ್ಣ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಬಹುದು. ಇದರಿಂದ ಜನರು ಮಾಹಿತಿ ಪಡೆಯುವರು. ದೂರದರ್ಶನ, ಟಿ.ವಿ. ಜಾಹೀರಾತುಗಳಿಂದಲೂ ಜಾಗೃತಿ ಮೂಡಿಸಬಹುದು.

ಸಂಘ-ಸAಸ್ಥೆಗಳು ಏಡ್ಸ್ ಜಾಗೃತ ವೇದಿಕೆಗಳನ್ನು ವ್ಯವಸ್ಥೆ ಮಾಡಿ ಉಪನ್ಯಾಸ, ಚಲನಚಿತ್ರ ಪ್ರದರ್ಶನ ಮೂಲಕರು ಜಾಗೃತಿ ಮೂಡಿಸಬಹುದು. ಗಂಡ-ಹೆAಡತಿ ಸುರಕ್ಷಿತ ಲೈಂಗಿಕ ಆರೋಗ್ಯ ರಕ್ಷಣೆಗಳಿಂದಲೂ ಆರೋಗ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಲೈಂಗಿಕ ಆರೋಗ್ಯ ರಕ್ಷಣೆ ಇಲ್ಲಿ ಪ್ರಮುಖ ಪಾತ್ರ ವಹಿಸುವುದು.

ಏಡ್ಸ್ ಸಮುದಾಯ ಕಾರ್ಯಕರ್ತರಿಗೆ ಮಾರ್ಗದರ್ಶಿಕೆಗಳನ್ನು ತರಲಾಗಿದೆ. ಕಾರ್ಯಕರ್ತರಿಗೆ ವೈಜ್ಞಾನಿಕ ತರಬೇತಿಯನ್ನು ನೀಡಲಾಗುತ್ತಿದೆ. ಬಹು ಜನರೊಂದಿಗೆ ಲೈಂಗಿಕ ಸಹವಾಸ, ಮಾದಕ ವಸ್ತುಗಳನ್ನು ಚುಚ್ಚಿಕೊಂಡು ಸೇವಿಸುವುದು ಇಂತವರಲ್ಲಿ ಏಡ್ಸ್ ಸೋಂಕು ಬರುವ ಸಾಧ್ಯತೆ ಹೆಚ್ಚು.

ಪ್ರತಿಯೊಬ್ಬರು ಏಡ್ಸ್ ರೋಗದ ಲಕ್ಷಣಗಳು, ಸೋಂಕು ಹರಡುವ ಬಗ್ಗೆ, ತಡೆಗಟ್ಟುವ ವಿಧಾನ ಇದನ್ನು ಚೆನ್ನಾಗಿ ತಿಳಿದಿರಬೇಕು. ಏಡ್ಸ್ ದಿನದಂದು ಜನತೆಯನ್ನು ಏಡ್ಸ್ ರೋಗದ ಬಗ್ಗೆ ತಿಳಿಯುವತ್ತ ಗಮನ ಹರಿಸಲಾಗುತ್ತಿದೆ. ಈ ದಿನ ಈ ರೋಗದ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುವ ಕೆಲಸವು ಆಗಬೇಕಿದೆ. ಅದು ವರ್ಷ ಪೂರ್ತಿ ಪರಿಣಾಮಕಾರಿಯು ಆಗಬೇಕಿದೆ.

- ಹರೀಶ್ ಸರಳಾಯ, ಮಡಿಕೇರಿ