ಮಡಿಕೇರಿ, ನ. ೩೦: ಕೊಡಗು ಪೋಕ್ಸೋ ಪ್ರಕರಣಗಳ ವಿಶೇಷ ಸರಕಾರಿ ಅಭಿಯೋಜಕರಾಗಿ ಮಡಿಕೇರಿಯ ವಕೀಲ ಬಿ. ಎಸ್. ರುದ್ರಪ್ರಸನ್ನ ಅವರನ್ನು ಸರಕಾರ ನೇಮಿಸಿದೆ.
ಬಿ. ಎಸ್.ರುದ್ರ ಪ್ರಸನ್ನ ಅವರು ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣಗಳ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.