ಮಡಿಕೇರಿ, ನ. ೩೦: ಪ್ರಸ್ತುತ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ಸಂಭವಿಸಿರುವ ಕಾಫಿ ಬೆಳೆ ನಷ್ಟ ಪರಿಹಾರಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಕೆ ಬಿರುಸಿನಿಂದ ಸಾಗಿದೆ. ಜಂಟಿ ಸಮೀಕ್ಷೆಯ ಮೂಲಕ ಬೆಳೆಗಾರರು ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲೆಡೆ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಜಿ ಸಲ್ಲಿಸಲು ಆರ್.ಟಿ.ಸಿ., ಆಧಾರ್ ಕಾರ್ಡ್ ಹಾಗೂ ರಾಷ್ಟಿçÃಕೃತ ಬ್ಯಾಂಕ್ನ ಪಾಸ್ ಪುಸ್ತಕದ ಪ್ರತಿ ಲಗತ್ತಿಸಬೇಕೆಂದು ಸೂಚನೆ ನೀಡಲಾಗಿದೆ.
ಆದರೆ ಕೊಡಗಿನಲ್ಲಿ ಹಲವಾರು ಬೆಳೆಗಾರರಿಗೆ ಸಿಂಗಲ್ ಆರ್.ಟಿ.ಸಿ. ಇಲ್ಲದಿರುವುದು ಸಮಸ್ಯೆಯಾಗಿದೆ. ಆರ್.ಟಿ.ಸಿ.ಯಲ್ಲಿ ಕುಟುಂಬದ ಹಲವರ ಹೆಸರು ಹಾಗೂ ಮೃತಪಟ್ಟವರ ಹೆಸರು ಕೂಡ ಇರುವುದು ಅಡ್ಡಿಯಾಗುತ್ತಿದೆ. ಪಾರ್ಟಿಷನ್ ಡೀಡ್ಬೇಕು, ಆರ್.ಟಿ.ಸಿ.ಯಲ್ಲಿ ಹೆಸರು ಇರುವ ಇತರರ ಒಪ್ಪಿಗೆಬೇಕು, ಮೃತಪಟ್ಟಿರುವವರಿದ್ದರೆ ದಾಖಲೆ ಬೇಕು. ಇಲ್ಲದಿದ್ದಲ್ಲಿ ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೆಲವೆಡೆ ಹೇಳಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಲು ತೊಂದರೆಯಾಗಿರುವವರು ‘ಶಕ್ತಿ’ಗೆ ತಿಳಿಸಿದ್ದಾರೆ. ನಾಪೋಕ್ಲುವಿನಲ್ಲಿ ಬೆಳೆಗಾರರೊಬ್ಬರಿಂದ ಈ ಕಾರಣ ಹೇಳಿ ಅರ್ಜಿಯನ್ನು ಪಡೆಯಲಾಗಿಲ್ಲ ಎಂದೂ ತಿಳಿದುಬಂದಿದೆ.
ಪಟ್ಟೆದಾರರ ಹೆಸರಿನಲ್ಲೇ ಹಲವರ ಜಾಗದ ದಾಖಲೆಗಳು ಇನ್ನೂ ಇವೆ. ಇಂತಹವರಿಗೂ ಇದು ಸಮಸ್ಯೆಯಾಗಲಿದೆ. ಈ ಬಗ್ಗೆ ಸ್ಥಳೀಯವಾಗಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಲ್ಲಿ ಮಾಹಿತಿಗಳು ಇರುತ್ತವೆ. ಕುಟುಂಬದವರಲ್ಲೇ ಗೊಂದಲ ಅಥವಾ ಆಕ್ಷೇಪಣೆಗಳು ಇದ್ದಲ್ಲಿ ಕಷ್ಟವಾಗುತ್ತದೆ. ಉಳಿದಂತೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಕಳೆದ ಬಾರಿಯೂ ಸಮಸ್ಯೆ ಇಲ್ಲದಂತೆ ಪರಿಹಾರ ಒದಗಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.