ಕೂಡಿಗೆ, ನ. ೩೦: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಆಧಾರಿತ ಮತ್ತು ಹಾರಂಗಿ ನಾಲೆಯ ನೀರನ್ನು ಅವಲಂಬಿಸಿ ಹೆಚ್ಚು ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಈ ಸಾಲಿನಲ್ಲಿ ಉತ್ತಮವಾದ ಮಳೆ ಬಂದಿದರಿAದ ನೀರಿನ ಸಂಗ್ರಹ ಹೆಚ್ಚಾಗಿ ಸಮಯಕ್ಕೆ ಸರಿಯಾಗಿ ಹಾರಂಗಿಯ ಅಚ್ಚುಕಟ್ಟು ಪ್ರದೇಶಗಳಿಗೆ ನಾಲೆಯ ಮೂಲಕ ನೀರನ್ನು ಹರಿಸಿದ ಪರಿಣಾಮವಾಗಿ ಈ ವ್ಯಾಪ್ತಿಯ ರೈತರು ಗದ್ದೆಗಳಲ್ಲಿ ಬೇಸಾಯ ಮಾಡಿದ ಪರಿಣಾಮವಾಗಿ, ಉತ್ತಮವಾದ ಭತ್ತದ ಬೆಳೆಯನ್ನು ಬೆಳೆದಿರುತ್ತಾರೆ. ಈ ಬೆಳೆಯು ಈಗಾಗಲೇ ಕಟಾವುಗೆ ಬಂದಿದೆ. ರೈತರು ಕಟಾವು ಮಾಡಲು ಸಿದ್ಧತೆಗಳನ್ನು ಮಾಡಿ ಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿಯೇ ಸರಕಾರದ ವತಿಯಿಂದ ಭತ್ತದ ಖರೀದಿ ಕೇಂದ್ರವನ್ನು ತೆರೆಯುವಂತೆ ಈ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.
ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಹೈಬ್ರೀಡ್ ತಳಿಯು ಸೇರಿದಂತೆ ವಿವಿಧ ಬಗೆಯ ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಈ ಸಾಲಿನಲ್ಲಿ ಬೆಳೆಯು ಉತ್ತಮವಾಗಿ ಬಂದಿದ್ದು, ಅಕಾಲಿಕ ಮಳೆಯಿಂದಾಗಿ ಬೆಳೆಯು ಕಟಾವಿಗೆ ಬಂದರೂ ಸಹ ಮೋಡ ಕವಿದ ವಾತಾವರಣದಿಂದಾಗಿ ಬೆಳೆಯನ್ನು ಕುಯಿಲು ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಸಿಲು ಬಂದರೆ ಈಗಾಗಲೇ ಕಟಾವಿಗೆ ಬಂದಿರುವ ಭತ್ತ ಬೆಳೆಯುವ ಕುಯಿಲು ಪ್ರಾರಂಭ ಮಾಡಲಾಗುವುದು. ಅದಕ್ಕೆ ಅನುಗುಣವಾಗಿ ಭತ್ತದ ಖರೀದಿ ಕೇಂದ್ರವನ್ನು ವರ್ಷಂಪ್ರತಿಯAತೆ ಈ ಬಾರಿಯು ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಕೇಂದ್ರದಲ್ಲಿ ಉತ್ತಮವಾದ ಗೋದಾಮು ಇರುವುದರಿಂದ ಭತ್ತದ ಖರೀದಿ ಕೇಂದ್ರವನ್ನು ತೆರೆದು ಸೂಕ್ತ ಬೆಲೆಯನ್ನು ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಕೃಷಿ ಇಲಾಖೆ, ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ಸರಕಾರದ ನಿಗದಿತ ದರದಲ್ಲಿ ಭತ್ತದ ಖರೀದಿ ಮಾಡಲು ಮುಂದಾಗಬೇಕೆAದು ರೈತರ ಒತ್ತಾಯವಾಗಿದೆ.
ಕಳೆದ ಸಾಲಿನಲ್ಲಿ ರೈತರು ಬೆಳೆದ ಭತ್ತವನ್ನು ಕಟಾವು ಮಾಡಿದ ಎರಡು ತಿಂಗಳ ಅನಂತರ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಲಾಗಿತ್ತು. ಆದರೆ ಕೇಂದ್ರವು ಪ್ರಾರಂಭವಾಗಲು ತಡವಾದ ಪರಿಣಾಮವಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಭತ್ತದ ದರದಲ್ಲಿ ಅನ್ಯಾಯವಾಗುತ್ತಿತ್ತು. ಆದುದರಿಂದ ಈ ಬಾರಿ ಅಕಾಲಿಕ ಮಳೆಯಿಂದಾಗಿ ರೈತರು ಬಾರೀ ನೊಂದಿರುವುದರಿAದ ಸಂಬAಧಿಸಿದ ಇಲಾಖೆಯವರು ರೈತರಿಗೆ ಅನ್ಯಾಯವಾಗದಂತೆ ತಡೆಯಲು ಮುಂದಾಗಬೇಕೆAದು ಶಿರಂಗಾಲ, ತೊರೆನೂರು, ಕೂಡಿಗೆ, ಹೆಬ್ಬಾಲೆ, ಶನಿವಾರಸಂತೆ ಭಾಗದ ನೂರಾರು ರೈತರ ಆಗ್ರಹವಾಗಿದೆ. ಈಗಾಗಲೇ ತಮಿಳುನಾಡಿನಿಂದ ಭತ್ತದ ಕಟಾವು ಮಾಡಲು ನೂತನ ತಂತ್ರಜ್ಞಾನ ಯಂತ್ರವನ್ನು ಅಳವಡಿಕೆ ಮಾಡಿಕೊಂಡಿರುವ ಟ್ರಾö್ಯಕ್ಟರ್‌ಗಳು ಬಂದಿವೆ. ಅವುಗಳನ್ನು ಉಪಯೋಗಿಸಿಕೊಂಡು ಮಳೆಯಿಂದಾಗಿ ಹಾಳಾಗುವ ಬದಲು ಕಟಾವು ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಈ ವ್ಯಾಪ್ತಿಯ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.