ಮಡಿಕೇರಿ, ನ. ೩೦: ಅಂರ‍್ರಾಷ್ಟಿçÃಯ ರೋಟರಿಗೆ ನೀಡುವ ದೇಣಿಗೆಯ ಪ್ರತಿಯೊಂದು ರೂಪಾಯಿಯೂ ಸದ್ವಿನಿಯೋಗವಾಗುತ್ತಿದ್ದು, ಜಗತ್ತಿನಾದ್ಯಂತ ರೋಟರಿಯಿಂದ ನೀಡಲಾಗುವ ಆರ್ಥಿಕ ನೆರವಿನ ಸದುಪಯೋಗವಾಗುತ್ತಿದೆ. ಈ ಮೂಲಕ ಜಗತ್ತಿನಲ್ಲಿಯೇ ದೇಣಿಗೆ ನೀಡುವಿಕೆಯ ಸಂಸ್ಥೆಗಳಲ್ಲಿ ರೋಟರಿಯು ಅಗ್ರಗಣ್ಯ ಎಂಬ ಹಿರಿಮೆ ಹೊಂದಿದೆ ಎಂದು ಅಂರ‍್ರಾಷ್ಟಿçÃಯ ರೋಟರಿ ನಿರ್ದೇಶಕ ಎ.ಎಸ್. ವೆಂಕಟೇಶ್ ಶ್ಲಾಘಿಸಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ಆಯೋಜಿತವಾಗಿದ್ದ ಎರಡು ದಿನಗಳ ರೋಟರಿ ಫೌಂಡೇಶನ್ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ವೆಂಕಟೇಶ್, ವಿಶ್ವದಾದ್ಯಂತ ನೆರವಿನ ಅಗತ್ಯವಿರುವವರಿಗೆ, ಪ್ರಾಕೃತಿಕ ವಿಕೋಪಗಳಲ್ಲಿ ನಲುಗಿರುವವರಿಗೆ ಸಕಾಲದಲ್ಲಿ ರೋಟರಿ ಸಂಸ್ಥೆಗಳು ನೆರವು ನೀಡುತ್ತಲೇ ಬಂದಿದೆ. ಹೀಗಾಗಿ ಇಂದಿಗೂ ರೋಟರಿ ಜನರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ರೋಟರಿ ಫೌಂಡೇಶನ್ ಆರ್ಥಿಕವಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ರೋಟರಿ ಫೌಂಡೇಶನ್‌ಗೆ ಆರ್ಥಿಕ ನೆರವು ನೀಡಲು ಜಗತ್ತಿನಾದ್ಯಂತಲಿನ ರೋಟರಿ ಸದಸ್ಯರು ಸದಾ ಮುಂದಾಗುತ್ತಲೇ ಇದ್ದಾರೆ ಎಂದರು.

ರೋಟರಿ ಪ್ರಮುಖ ರವಿವಡ್ಲಮನಿ ಮಾತನಾಡಿ, ಜೀವನಕ್ಕೆ ಎಷ್ಟು ಹಣದ ಅಗತ್ಯತೆ ಇದೆ ಎಂಬುದನ್ನು ಮೊದಲು ಪ್ರತೀಯೋರ್ವರು ನಿರ್ಧರಿಸಿಕೊಳ್ಳಬೇಕು. ಅಗತ್ಯಕ್ಕಿಂತ ಅಧಿಕ ಹಣವನ್ನು ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗಿ ನೀಡಬೇಕೆಂದು ಕೋರಿದರು. ಅಗತ್ಯವಿರುವವರಿಗೆ ನೆರವಾಗಲು ಬಯಸುವವರು ತಮ್ಮ ಸಾವಿನ ನಂತರವೂ ಉಯಿಲಿನ ಮೂಲಕ ತಮ್ಮ ಸಂಪಾದನೆಯನ್ನು ಯೋಗ್ಯರಿಗೆ ನೀಡಬಹುದಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಇಂತಹ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಈ ಮೂಲಕ ಸಾವಿನ ನಂತರವೂ ಸೇವೆ ಕೈಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ರೋಟರಿ ಪ್ರಮುಖರಾದ ಲಕ್ಕರಾಜು ಸತ್ಯನಾರಾಯಣ, ಸುರೇಶ್ ಹರಿ, ರೋಟರಿ ಜಿಲ್ಲಾ ರಾಜ್ಯಪಾಲ ಎ. ಆರ್. ರವೀಂದ್ರ ಭಟ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ವಿಚಾರ ಸಂಕಿರಣ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ರೋಟರಿ ಉಪರಾಜ್ಯಪಾಲ ಅನಿಲ್ ಹೆಚ್.ಟಿ., ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್, ರೋಟರಿ ಜಿಲ್ಲಾ ಪ್ರಮುಖರಾದ ಡಾ. ಎಸ್. ಭಾಸ್ಕರ್, ಡಾ. ಸೂರ್ಯನಾರಾಯಣ್, ಸುರೇಶ್ ಚಂಗಪ್ಪ, ವಿಶ್ವಾಸ್ ಶೆಣೈ ವೇದಿಕೆಯಲ್ಲಿದ್ದರು. ಬಿ.ಜಿ. ಅನಂತಶಯನ, ಪ್ರಸಾದ್ ಗೌಡ, ಜಿ.ಆರ್. ರವಿಶಂಕರ್, ಶಫಾಲಿ ರೈ, ವಿಜಯಲಕ್ಷಿö್ಮ ಚೇತನ್ ನಿರೂಪಿಸಿದರು. ರೋಟರಿ ಜಿಲ್ಲೆ ೩೧೮೧ ಗೆ ಸೇರಿದ ೫೫೦ಕ್ಕೂ ಅಧಿಕ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.