ಪೊನ್ನಂಪೇಟೆ, ನ. ೩೦: ಭಾರತೀಯ ಭೂಸೇನೆಯ ಸಿಗ್ನಲ್ಸ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆಯಲ್ಲಿದ್ದ ಮುಕ್ಕಾಟಿರ ಬಿ. ಪೊನ್ನಪ್ಪ ಅವರು ಇದೀಗ ಕರ್ನಲ್ ಆಗಿ ಬಡ್ತಿ ಹೊಂದಿದ್ದಾರೆ. ಜೊತೆಗೆ ಸ್ಟೆçöÊಕರ್ಸ್ ಮರ್ಕ್ಯೂರಿ ರೆಜಿಮೆಂಟ್‌ನಲ್ಲಿ ಕಮಾಂಡಿAಗ್ ಆಫೀಸರ್ ಆಗಿ ಇವರನ್ನು ನಿಯುಕ್ತಿಗೊಳಿಸಲಾಗಿದೆ.

ಪೊನ್ನಪ್ಪ ಅವರು ಗೋಣಿಕೊಪ್ಪಲು ಸಮೀಪದ ಅರುವತ್ತೋಕ್ಲು ಗ್ರಾಮದ ಮುಕ್ಕಾಟಿರ ಶೀಲ ಹಾಗೂ ಕಾಶಿ ಬೆಳ್ಯಪ್ಪ ಅವರ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ವಾಯು ಸೇನಾಧಿಕಾರಿ ಪಟ್ಟಡ ತಮ್ಮಿ ಅಚ್ಚಪ್ಪ ಮತ್ತು ವೀಣಾ ದಂಪತಿಯ ಪುತ್ರಿ ನಿಶ್ಚಿತರನ್ನು ಪೊನ್ನಪ್ಪ ವಿವಾಹವಾಗಿದ್ದಾರೆ.