ವೀರಾಜಪೇಟೆ, ನ. ೩೦: ನಿರಂತರವಾಗಿ ಮಗಳಿಗೆ ಹಿಂಸೆ ನೀಡುತ್ತಿದ್ದ ಅಳಿಯನ ಮೇಲೆ ಮಾವ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪೊಲೀಸ್ ದೂರು ದಾಖಲಾಗಿದೆ. ಸಮೀಪದ ಚೋಕಂಡಳ್ಳಿ ಗ್ರಾಮದ ನಿವಾಸಿ ಸಮೀರ್ (೨೮) ಮಾವನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.

ಕೊಂಡAಗೇರಿಯ ನಿವಾಸಿ ಮುಸ್ತಫಾ ಎಂಬವರ ಮಗಳಾದ ರಂಶೀನಳನ್ನು ಚೋಕಂಡಳ್ಳಿ ಗ್ರಾಮದ ನಿವಾಸಿ ಸಮೀರ್‌ಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಮಗುವೊಂದಿದ್ದು, ಇತ್ತೀಚೆಗೆ ಕೌಟುಂಬಿಕ ಕಲಹಗಳು ಆರಂಭವಾಗಿ ರಂಶೀನ ಮಗುವಿನೊಂದಿಗೆ ತವರುಮನೆ ಸೇರಿದಳು. ಈ ನಡುವೆ ಕೊಂಡAಗೇರಿಯ ಮನೆಯಲ್ಲಿದ್ದ ರಂಶೀನಳÀ ಮೇಲೆ ಸಮೀರ್ ಹಲ್ಲೆ ನಡೆಸಿದ್ದು, ಸಮೀರ್‌ನ ವಿರುದ್ಧ ರಂಶೀನ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೊಂಡAಗೇರಿಯ ನಿವಾಸಕ್ಕೆ ತೆರಳಿದ್ದ ಸಮೀರ್ ರಂಶೀನÀ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ಗಮನಿಸಿದ ರಂಶೀನಳ ತಂದೆ ಮುಸ್ತಫಾ ಅಳಿಯ ಸಮೀರ್‌ನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ಸಮೀರ್ ಮಾವ ಮುಸ್ತಫಾ ಮತ್ತು ಇತರ ಏಳು ಮಂದಿಯ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಕೆ.ಕೆ. ಎಸ್.