ಗುಡ್ಡೆಹೊಸೂರು, ನ. ೩೦: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎಲ್ಲಾ ವಿಭಾಗದ ಬಸ್‌ಗಳನ್ನು ಗುಡ್ಡೆಹೊಸೂರಿನಲ್ಲಿ ನಿಲ್ಲಿಸಬೇಕು ಎಂಬದು ಈ ವಿಭಾಗದ ಪ್ರಯಾಣಿಕರ ಬೇಡಿಕೆ ಯಾಗಿತ್ತು. ವೇಗದೂತ ಬಸ್‌ಗಳನ್ನು ಇಲ್ಲಿ ನಿಲ್ಲಿಸದ ಕಾರಣ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಸರಕಾರಿ ಹಾಗೂ ಖಾಸಗಿ ನೌಕರರು ಸೌಲಭ್ಯ ವಂಚಿತರಾಗಿದ್ದರು. ಆದರೆ ಇದೀಗ ಕುಶಾಲನಗರ ಕಚೇರಿಯಿಂದ ಎಲ್ಲಾ ವಿಭಾಗದ ಬಸ್‌ಗಳನ್ನು ಗುಡ್ಡೆಹೊಸೂರಿನಲ್ಲಿ ನಿಲುಗಡೆಗೊಳಿಸುವಂತೆ ಲಿಖಿತ ಆದೇಶ ಹೊರಬಿದ್ದಿದೆ.