ಚೆಟ್ಟಳ್ಳಿ, ನ. ೩೦: ವಿವಿಧ ಆಹಾರ ಹಾಗೂ ಪಾನೀಯ ತಯಾರಿಕೆಯಲ್ಲಿ ವಿಶ್ವದಲ್ಲೇ ಹೆಸರುಗಳಿಸಿರುವ ನೆಸ್ಲೆ ಕಂಪೆನಿಯು ಅಂಗಾAಶ ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ವಿನೂತನ ಕಾಫಿ ತಳಿಗಳನ್ನು ಚೆಟ್ಟಳ್ಳಿ ಕಾಫಿ ಸಂಶೋದನಾ ಉಪಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ನೆಸ್ಲೆ ಕಂಪೆನಿಯು ಸಂಶೋಧಿಸಿ ಅಭಿವೃದ್ಧಿಪಡಿಸಿದ ಭಾರತದ ತಾಪಮಾನಕ್ಕೆ ಫಲದಾಯಕವಾಗುವ ನೂತನ ರೋಬಸ್ಟಾ ಹಾಗೂ ಅರೇಬಿಕಾ ತಳಿಗಳನ್ನು ನೆಸ್ಲೆಯ ಸಂಶೋಧನಾ ಕೇಂದ್ರ ಫ್ರಾನ್ಸಿನಿಂದ ಭಾರತದ ಕಾಫಿ ಮಂಡಳಿಗೆ ನೀಡಿತು. ಕಾಫಿ ಮಂಡಳಿಯ ಮುಖ್ಯ ಕಚೇರಿ ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ ತಳಿ ಅಭಿವೃದ್ಧಿ ಪಡಿಸಲಾಯಿತು. ಕಾಫಿ ಮಂಡಳಿಯ ನಿರ್ದೇಶನದಂತೆ ೨೦೧೯ರಲ್ಲಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ನೆಸ್ಲೆಯ ಸಂಶೋಧಿತ ನೂತನ ಕಾಫಿ ತಳಿಗಳಾದ ಈಖಖಿ೬೫, ಈಖಖಿ೯೭, ಈಖಖಿ೧೦೧ ಹಾಗೂ ಭಾರತೀಯ ಮೂಲತಳಿ ೨೭೪ ಮತ್ತು ಅxಖ ನೆಟ್ಟು ಬೆಳೆಸಿದರೆ ೨೦೨೦ರಲ್ಲಿ ಈಖಖಿ೯೫, ಈಖಖಿ೧೩೩, ಈಖಖಿ೧೩೪ ಹಾಗೂ (ಃಖseಡಿie) ಮೂಲಕ ಕಾಫಿ ತಳಿಗಳ ಅಭಿವೃದ್ಧಿ ಪಡಿಸುವ ನೂತನ ಪ್ರಯತ್ನಕ್ಕೆ ಮುಂದಾಗಿದೆ.
ಭಾರತೀಯ ಕಾಫಿ ಮಂಡಳಿಯು ಸುಮಾರು ೧೩ ವಿವಿಧ ಕಾಫಿ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಜೊತೆಗೆ ಹೆಚ್ಚಿನ ಆದಾಯಗಳಿಸುವಂತ ವಿವಿಧ ಕಾಫಿü ತಳಿಗಳನ್ನು ಸಂಶೋಧಿಸಿ ಅಭಿವೃದ್ಧಿ ಪಡಿಸಲಾಗುತ್ತಾ ಬರುತಿದೆ. ನೆಸ್ಲೆ ಕಂಪೆನಿ ಸಂಶೋಧಿತ ೬ ತಳಿಗಳ ಪ್ರತೀ ತಳಿಯ ೩೦ ಗಿಡಗಳು ಸೇರಿ ಭಾರತೀಯ ೩ ತಳಿಗಳ ಸೇರಿ ಒಟ್ಟು ೨೭೦ ರೋಬಸ್ಟಾ ಕಾಫಿ ಗಿಡಗಳನ್ನು ಹಾಗೂ ಅರೇಬಿಕಾದ ನೂತನ ತಳಿಗಳನ್ನು ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರದಲ್ಲಿ ಪ್ರತ್ಯೇಕ ಫ್ಲಾಟ್‌ಗಳಲ್ಲಿ ಕಳೆದ ಎರಡು ವರ್ಷಗಳಿಂದ ಬೆಳೆಸಲಾಗುತ್ತಿದೆ. ಈ ಕಾಫಿ ಗಿಡಗಳ ಮಧ್ಯೆ ಭಾರತೀಯ ಮೂಲದ ಕಾಫಿ ತಳಿಯನ್ನು ಪ್ರಾಯೋಗಕವಾಗಿ ನೆಟ್ಟು ಬೆಳೆಸಲಾಗುತ್ತಿದೆ. ಭಾರತೀಯ ಕಾಫಿ ಮಂಡಳಿಯ ಕೇರಳ, ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಗಳಲ್ಲೂ ನೆಸ್ಲೆ ಕಂಪೆನಿಯ ನೂತನ ಸಂಶೋಧಿತ ಕಾಫಿ ಗಿಡಗಳನ್ನು ಪ್ರಾಯೋಗಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಕೇಂದ್ರದಲ್ಲಿ ಮೊದಲ ವರ್ಷದಿಂದಲೇ ಗಿಡಗಳ ನಿರ್ವಹಣೆಗೆ ಸಸ್ಯ ಅಭಿವೃದ್ಧಿ ಕೀಟ ಬಾಧೆ, ಗೊಬ್ಬರಗಳ ನಿರ್ವಹಣೆಯ ಜವಾಬ್ದಾರಿಯನ್ನು ಕೇಂದ್ರದ ತಜ್ಞರಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆಸ್ಲೆ ಕಂಪೆನಿಯ ಅಧಿಕಾರಿಗಳು ಭೇಟಿ ನೀಡಿ ಗಿಡಗಳ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳಲ್ಲಿ ನೆಸ್ಲೆಯ ಸಂಶೋಧಿತ ರೋಬಸ್ಟಾ ನೂತನ ತಳಿಗಳು ಹೂಬಿಡತೊಡಗಿದೆ. ಮುಂದಿನ ಹಂತವಾಗಿ ಫಸಲಿಗೆ ಬಂದ ನಂತರ ಕಾಫಿಯನ್ನು ಪರಿಶೀಲಿಸಿ ಕಾಫಿಯನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಿ ಅದರ ಗುಣಮಟ್ಟವನ್ನು ತಿಳಿಯಲಾಗುತ್ತದೆ. -ಪುತ್ತರಿರ ಕರುಣ್ ಕಾಳಯ್ಯ