ಮುಳ್ಳೂರು, ನ. ೩೦: ರಾಜ್ಯದಲ್ಲಿ ಮೇಲ್ಮನೆ ಚುನಾವಣೆ ಕಾವು ಏರಿದೆ. ರಾಜಕೀಯ ಮೇಲಾಟ ಶುರುವಾಗಿದೆ. ಗೆಲುವಿಗಾಗಿ ಕಾದಾಟ, ರಣತಂತ್ರ ಎಲ್ಲವೂ ಮುನ್ನೆಲೆಗೆ ಬಂದಿದೆ. ಈ ನಡುವೆ ಶಾಲೆಯೊಂದರಲ್ಲಿ ನಡೆದ ಚುನಾವಣೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದೆ. ಹಲವು ಬೆಳವಣಿಗೆಗಳು ಸಂತಸ ತರಿಸಿದೆ.
ರಾಷ್ಟಿçÃಯ ಸಂವಿಧಾನ ದಿನಾಚರಣೆ ಪ್ರಯುಕ್ತ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೦-೨೧ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಸಂವಿಧಾನಾತ್ಮಕವಾಗಿ ನಡೆಸಲಾ ಯಿತು. ವಿದ್ಯಾರ್ಥಿಗಳಿಗೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆಯುವಂತೆ ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಲಾಯಿತು. ಚುನಾವಣೆಯ ಅಧಿಸೂಚನೆ ಹೊರಡಿಸುವುದು, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಠೇವಣಿ ಇಡುವುದು, ನಾಮಪತ್ರ ಪರಿಶೀಲನೆ, ಚಿಹ್ನೆಗಳ ಹಂಚಿಕೆ, ಚುನಾವಣೆ ಪ್ರಚಾರ, ನೀತಿ ಸಂಹಿತೆ, ಮತದಾನ ಮಾಡುವುದು, ಮತದಾನ ಎಣಿಕೆ, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಹೀಗೆ ಎಳೆಎಳೆಯಾಗಿ ಚುನಾವಣಾ ಆಯೋಗದ ಪ್ರಕ್ರಿಯೆಗಳ ಕುರಿತು ಶಾಲಾ ಮಕ್ಕಳಿಗೆ ಸಂವಿಧಾನಾತ್ಮಕ ಮತ್ತು ಆಡಳಿತ ವ್ಯವಸ್ಥೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳು ಸಹ ಆಸಕ್ತಿಯಿಂದ ಭಾಗವಹಿಸಿ ಅನುಭವ ಪಡೆದು ಕೊಂಡು ಮತದಾನದ ಮಹತ್ವದ ಬಗ್ಗೆ ಅರಿವು ಪಡೆದುಕೊಂಡರು. ಶಾಲಾ ಸಂಸತ್ ಚುನಾವಣೆಯಲ್ಲಿ ೪ನೇ ತರಗತಿ ವಿದ್ಯಾರ್ಥಿನಿ ಎಂ.ಎ.ತನ್ವಿ ಅತ್ಯಧಿಕ ಮತ ಪಡೆದು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರೆ ಆರೋಗ್ಯ ಮಂತ್ರಿಯಾಗಿ ಪ್ರತಿಕ್ಷಾ, ಸ್ವಚ್ಛತ್ತಾ ಮಂತ್ರಿಯಾಗಿ ಮಿಲನ್, ಸಾಂಸ್ಕೃತಿಕ ಮಂತ್ರಿಯಾಗಿ ಪುಣ್ಯ, ಕ್ರೀಡಾ ಮಂತ್ರಿಯಾಗಿ ಅಶ್ವಿನ್ ಆಯ್ಕೆಗೊಂಡರು ಹಾಗೂ ಸಮೃದ್ ಮತ್ತು ವಿದ್ಯಾ ಕ್ರಮವಾಗಿ ವಿಜ್ಞಾನ ಮತ್ತು ಗಣಿತ ಸಂಘಗಳ ನಿರ್ದೇಶಕರುಗಳಾಗಿ ಆಯ್ಕೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಚಾಕಲೇಟ್ ಹಂಚಿಕೆ ಆರೋಪಿ
ಶಾಲಾ ಸಂಸತ್ ಚುನಾವಣೆ ಸಂದರ್ಭದಲ್ಲಿ ನಿಜವಾದ ಚುನಾವಣೆ ಪ್ರಕ್ರಿಯೆಯಂತೆ ಚುನಾವಣೆ ಅಧಿಸೂಚನೆಯಿಂದ ಹಿಡಿದು ಮತದಾನ, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರದವರೆಗಿನ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಪ್ರಾತ್ಯಕ್ಷತೆ ಮೂಲಕ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳ ಚುನಾವಣೆ ಪ್ರಕ್ರಿಯೆ ಸಂದರ್ಭ ತಪ್ಪಾಗಿ ಬರೆದ ನಾಮಪತ್ರ ವನ್ನು ಚುನಾವಣಾಧಿಕಾರಿ ತಿರಸ್ಕರಿಸಿ ದರಲ್ಲದೆ ಮತ್ತೊಬ್ಬ ವಿದ್ಯಾರ್ಥಿ ಅಭ್ಯರ್ಥಿ ಮತಕ್ಕಾಗಿ ಚಾಕೋಲೆಟ್ ಹಂಚಿದ ಆರೋಪದ ಮೇಲೆ ಚುನಾವಣಾಧಿಕಾರಿ ನಾಮಪತ್ರವನ್ನು ರದ್ದುಗೊಳಿಸಿದ ಬೆಳವಣೆಗೆಯು ನಡೆಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಅಭ್ಯರ್ಥಿಗಳು ನಾಮುಂದು ತಾಮುಂದು ಎಂಬAತೆ ನಾಮಪ್ರತ ಸಲ್ಲಿಸಲು ಮುಗಿಬಿದ್ದ ರಲ್ಲದೆ ಬಿರುಸಿನ ಮತ್ತು ಅಬ್ಬರದ ಮತದಾನ ಪ್ರಚಾರ ನಡೆಸಿದರು.