ಮಡಿಕೇರಿ, ನ. ೩೦: ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಘಟಕದ ವತಿಯಿಂದ ಮಡಿಕೇರಿ ನಗರ ಸಭೆ ನಿರ್ವಹಣೆಯ ಶಾಲೆಗಳಾದ ಎ.ವಿ. ಶಾಲೆ, ಹಿಂದೂಸ್ಥಾನಿ ಶಾಲೆ ಹಾಗೂ ಜಿ.ಟಿ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಜಮೆಟ್ರಿ ಬಾಕ್ಸ್, ಕಂಪಾಸ್ ಬಾಕ್ಸ್, ಮಾಸ್ಕ್ಗಳನ್ನು ವಿತರಿಸಲಾಯಿತು. ಈ ಸಂದರ್ಭ ಕೊಡಗು ರೆಡ್‌ಕ್ರಾಸ್‌ನ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಪ್ರಧಾನ ಕಾರ್ಯದರ್ಶಿ ಮುರಳೀಧರ್, ಉಪಾಧ್ಯಕ್ಷ ಪಿ.ಆರ್. ರಾಜೇಶ್ ಹಾಜರಿದ್ದರು.