ಕೂಡಿಗೆ, ನ. ೩೦: ಕೂಡಿಗೆ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟಿçÃಯ ಸಂವಿಧಾನ ದಿನಾಚರಣೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಇತ್ತೀಚಿನ ಕೈಂ ಬಗ್ಗೆ ಮತ್ತು ಕಾನೂನಿನ ಅರಿವಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವಿದ್ಯಾರ್ಥಿಗಳು ಸಂವಿಧಾನ ರಚನೆ ಬಗ್ಗೆ ಪುಸ್ತಕ ಗಳನ್ನು ಓದಿ ಹೆಚ್ಚಿನ ಮಾಹಿತಿ ಯನ್ನು ತಿಳಿದುಕೊಳ್ಳಬೇಕು ಎಂದರು.

ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ರಮೇಶ್ ಸಂವಿಧಾನ ಪ್ರಸ್ತಾವನೆಯನ್ನು ವಾಚಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಮಾತನಾಡಿ, ಪೊಲೀಸ್ ಇಲಾಖೆಯ ಕಾನೂನಿನ ನಿಯಮಗಳು, ಸಂವಿಧಾನದ ವಿಷಯಗಳ ಬಗ್ಗೆ ಕೂಲಂಕಷವಾಗಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಹೇಮರಾಜ್, ಕಾವೇರಮ್ಮ, ಸೂಸಿ, ತಂಗಚನ್ನ್, ಅರ್ಚನ್, ಪಲ್ಲವಿ, ಪಾವನ, ಅಭಿಷೇಕ್ ಹಾಜರಿದ್ದರು. ವಿದ್ಯಾರ್ಥಿಗಳಾದ ಯಕ್ಷ, ಮತ್ತು ವೈರ್ಷಣಿ ರಾಷ್ಟಿçÃಯ ಸಂವಿಧಾನದ ಬಗ್ಗೆ ಭಾಷಣ ಮಾಡಿದರು. ವಿದ್ಯಾರ್ಥಿ ಸಿಂಚನ ಸ್ವಾಗತಿಸಿ, ಲೋವಿನ್ ವಂದಿಸಿದರು.