ಸಿದ್ದಾಪುರ, ನ. ೨೯: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾದ ಬೆಳೆಗಾರರು ಸರ್ಕಾರದ ವತಿಯಿಂದ ಸಿಗುವ ಪರಿಹಾರಕ್ಕೆ ಅರ್ಜಿಗಳನ್ನು ನೀಡುವಂತೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ತಿಳಿಸಿದ್ದಾರೆ.

ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾದ ಪ್ರದೇಶಗಳನ್ನು ಕೃಷಿ ತೋಟಗಾರಿಕೆ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯ ವತಿಯಿಂದ ಜಂಟಿ ಸಮೀಕ್ಷೆ ನಡೆಸಿ ಶೇ.೩೩ ಕ್ಕಿಂತ ಅಧಿಕ ಬೆಳೆಹಾನಿಯಾದ ರೈತರು ಬೆಳೆಹಾನಿ ಪರಿಹಾರಕ್ಕೆ ಅರ್ಜಿಗಳನ್ನು ನೀಡುವಂತೆ ತಿಳಿಸಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ಬೆಳೆಗಾರರು ಅರ್ಜಿಗಳನ್ನು ನೀಡುವಂತೆ ಗ್ರಾಮ ಲೆಕ್ಕಿಗರಾದ ಸಚಿನ್ ತಿಳಿಸಿದ್ದಾರೆ.