ಮಡಿಕೇರಿ, ನ. ೨೯: ಇತ್ತೀಚೆಗೆ ಅರುವತೊಕ್ಲುವಿನ ಸರ್ವದೈವತಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪೊನ್ನಿಮಾಡ ಪ್ರದೀಪ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ರೋಟರಿ ಅಧ್ಯಕ್ಷೆ ತೀತಮಾಡ ನೀತ್ ಕಾವೇರಮ್ಮ ಹಾಗೂ ಕಾರ್ಯದರ್ಶಿಯಾದ ಸುಭಾಷಿಣಿ ಎಸ್. ಜಪ್ಪೆಕೊಡಿ, ರೋಟರಿಯನ್ ವಿಜಯನ್ ಭಾಗವಹಿಸಿದ್ದರು.
ಮುಖ್ಯ ಭಾಷಣಕಾರರಾಗಿ ಡಾ. ಚಂದ್ರಶೇಖರ್ ಭಾಗವಹಿಸಿ ನಾಯಕತ್ವ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಕುರಿತು ಹಿತವಚನ ನೀಡುವುದರೊಂದಿಗೆ ಕೊರೊನಾದ ಬಗ್ಗೆ ಎಚ್ಚರಿಕೆಯಿಂದಿರುವAತೆಯೂ ಕಿವಿ ಮಾತು ಹೇಳಿದರು.
೨೦೨೧-೨೨ನೇ ಸಾಲಿಗೆ ಇಂರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ೯ನೇ ತರಗತಿಯ ಚೆಂಬಾAಡ ಸಮರ್ಥ್ ಭೀಮಯ್ಯ, ಕಾರ್ಯದರ್ಶಿಯಾಗಿ ಸೇನೆರ ದಿಗಂತ್ ದೇವಯ್ಯ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಪದಾಧಿಕಾರಿಗಳ ಹಾಗೂ ಸದಸ್ಯರ ಪರವಾಗಿ ನೂತನ ಅಧ್ಯಕ್ಷ ಭೀಮಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಪ್ರಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ಮೋನಿಕ ಕಾವೇರಮ್ಮ ಸ್ವಾಗತಿಸಿ, ಅಕ್ಷಿತ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಕಾರ್ಯದರ್ಶಿ ದಿಗಂತ್ ದೇವಯ್ಯ ವಂದಿಸಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪೊನ್ನಿಮಾಡ ಪ್ರದೀಪ್ ಹಾಗೂ ಪ್ರಾಥಮಿಕ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲ ಬೋಪಣ್ಣ ಹಾಗೂ ಕೋಆಡಿನೇಟರ್ ಆಫ್ ಸರ್ವದೈವತಾ ಇಂರ‍್ಯಾಕ್ಟ್ ಕ್ಲಬ್ ಹೆಮ್ಮಚಿಮನೆ ಧರಣಿ ಆಶಿತ ಹಾಜರಿದ್ದರು.