ಮದೆನಾಡು, ನ. ೨೯ : ಮದೆನಾಡು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಕಟ್ಟೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಂವಿಧಾನ ದಿನದ ಧ್ಯೇಯದ ಪ್ರಮಾಣವಚನವನ್ನು ಶಾಲಾ ಶಿಕ್ಷಕಿ ಕೋಮಲ ಬೋಧಿಸಿದರು.

ಇದೇ ಸಂದರ್ಭದಲ್ಲಿ ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎ. ಚಂದ್ರಾವತಿ ಕೊಡುಗೆಯಾಗಿ ನೋಟ್ ಪುಸ್ತಕವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಡುಗಲ್ಲು ರಾಮಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಯು. ಸುಂದರ, ಮಾಜಿ ವಿದ್ಯಾರ್ಥಿ ರಾಮು, ಅಡುಗೆ ಮುಖ್ಯಸ್ಥೆ ಹೆಚ್.ಕೆ. ರಾಧಾ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಯಶೋಧ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಕೆ. ಬಾಲಕೃಷ್ಣ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.