ಮಡಿಕೇರಿ, ನ. ೨೯: ಕೋಟೆಶ್ವರದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯ ಶಾಲಾ ಹಾಗೂ ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಆಶ್ರಯದಲ್ಲಿ ಡಿಸೆಂಬರ್ ೫ರಂದು ಭಾಗಮಂಡಲದ ಶ್ರೀ ಕಾಶಿಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕೋಟೆಶ್ವರದ ಸಹಯೋಗದಲ್ಲಿ ಆಯುರ್ವೇದ ತಜ್ಞ ವೈದ್ಯರು ಅಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆಯ ತನಕ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಮಂಗಳೂರಿನ ವಿವೇಕ ಟ್ರೇಡರ್ ವತಿಯಿಂದ ಅವಶ್ಯಕ ರೋಗಿಗಳಿಗೆ ಉಚಿತ ಔಷಧಿ ಒದಗಿಸಲಾಗುವುದು. ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾಶೀಮಠದ ಆಡಳಿತ ಮಂಡಳಿ ಮತ್ತು ಶಿಬಿರ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.