ಭತ್ತ ಕೃಷಿಯು ಕೊಡಗಿನ ಜನತೆಗೆ ಒಂದು ಸಾಂಪ್ರಾದಾಯಿಕ ಹಾಗೂ ಸಡಗರ ಸಂಭ್ರಮದ ಕೃಷಿ, ಈ ಭಾಗದÀಲ್ಲಿ ಭತ್ತ ಕೃಷಿಯು ಪುತ್ತರಿ/ಹುತ್ತರಿ ಹಬ್ಬದೊಂದಿಗೆ ಬೆಸೆದು ಕೊಂಡಿರುವುದು ಅತ್ಯಂತ ವಿಶೇಷವಾದ ಸಂಗತಿ. ಕೊಡಗು ಜಿಲ್ಲೆಯೊಂದರಲ್ಲಿ ಸುಮಾರು ೩೬ ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗುತಿತ್ತು, ಆದರೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಸುಮಾರು ೨೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಈ ಪ್ರಕ್ರಿಯೆಗೆ ಮುಖ್ಯ ಕಾರಣ ಕಾರ್ಮಿಕರ ಕೊರತೆ ಬಹಳ ಪ್ರಮಖವಾದುದ್ದು ಜೊತೆಗೆ ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ವೇತನ, ಮೂಲಭೂತವಾಗಿ ಭತ್ತದ ಕೃಷಿಗೆ ಬೇಕಾಗಿರುವ ಇತರ ಪರಿಕರಗಳ ಬೆಲೆ ಹೆಚ್ಚಳ ಹಾಗಾಗಿ ಅನೇಕ ಭತ್ತದ ಗದ್ದೆಗಳನು ಮಲೆನಾಡಿನಲ್ಲಿ ಪಾಳು ಬಿಡಲಾಗಿದೆ. ಈ ನಿಟ್ಟಿನಲ್ಲಿ ಪಾಳುಬಿದ್ದ ಗದ್ದೆಗಳನ್ನು ಮತ್ತೆ ಭತ್ತ ಕೃಷಿಗೆತರಲು “ಡ್ರಂ ಸೀಡರ್‌ನಿಂದ ಭತ್ತ ಬಿತ್ತನೆ ಪದ್ಧತಿಯು” ಸಹಕಾರಿಯಾಗಲಿದೆ. ಈ ಪದ್ಧತಿಯಲ್ಲಿ ಭತ್ತ ಬೆಳೆಯುವುದರಿಂದ ಭತ್ತದ ನಾಟಿಗೆ ತಗಲುವ ಸುಮಾರು ೪ ರಿಂದ ೫ ಸಾವಿರ ರೂಪಾಯಿಗಳನ್ನು ಉಳಿಸಬಹುದು ಜೊತೆಗೆ ಹೆಚ್ಚಿನ ಇಳುವರಿಯನ್ನು ಸಹ ಪಡೆಯುಬವುದು.

ಬಿತ್ತನೆ ಪ್ರಮಾಣ ಮತ್ತು ಬೀಜ ತಯಾರಿ: ಒಂದು ಎಕರೆಗೆ ೮-೧೬ ಕಿ.ಗ್ರಾಂ. ಬಿತ್ತನೆ ಬೀಜ ಬೇಕು. ಈ ಬೀಜವನ್ನು ೨೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ನೀರಿನಿಂದ ಹೊರತೆಗೆದು, ಪ್ರತಿ ಕಿ.ಗ್ರಾ. ಬೀಜಕ್ಕೆ ೪ ಗ್ರಾಂ. ಕಾರ್ಬೆಂಡೆಜಿA ಶಿಲೀಂಧ್ರನಾಶಕದಿAದ ಉಪಚರಿಸಿ, ೨೪-೩೬ ಗಂಟೆಗಳ ಕಾಲ ಗಾಳಿಯಾಡುವ ಗೋಣೆಚೀಲದಲ್ಲಿ ಕಟ್ಟಿ ಬೆಚ್ಚನೆಯ ಸ್ಥಳದಲ್ಲಿ ಇಟ್ಟು ಚೀಲದ ಮೇಲೆ ಕಲ್ಲಿನ ತೂಕವನ್ನಿಡಬೇಕು. ಚೀಲದ ಮೇಲ್ಮೆöÊ ಒಣಗದಂತೆ ಚೀಲದ ಮೇಲೆ ಆಗಾಗ್ಗೆ ತೆಳುವಾಗಿ ನೀರು ಚಿಮುಕಿಸುತ್ತಿರಬೇಕು. ಈ ರೀತಿ ಮಾಡುವುದರಿಂದ ೨೪-೩೬ ಗಂಟೆಯಲ್ಲಿ ಬೀಜ ಕುಡಿ ಮೊಳಕೆಯೊಡೆಯುತ್ತದೆ. ಈ ಕುಡಿ ಮೊಳಕೆಯನ್ನು ಡ್ರಂನಲ್ಲಿ ಸಮನಾಗಿ ತುಂಬಿ ಬಿತ್ತನೆ ಮಾಡಬೇಕು. ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚು ಇರುವುದರಿಂದ ಕುಡಿ ಮೊಳಕೆ ೩೬ ಗಂಟೆಗಿAತ ಮುಂಚೆ ಬರಬಹುದು.

ಎಕರೆಗೆ ೮ ಕೆ.ಜಿ. ಮೊಳಕೆಯೊಡೆದ ಹೈಬ್ರಿಡ್ ಭತ್ತದೊಂದಿಗೆ ಸಮ ಪ್ರಮಾಣದ ಮೊಳಕೆ ಬಾರದ (ಹುರಿದು ೧೨ ಗಂಟೆ ಕಾಲ ನೀರಿನಲ್ಲಿ ನೆನಸಿ ತೆಗೆದ) ಇತರೆ ಭತ್ತದೊಂದಿಗೆ ಬೆರೆಸಿ ಬಳಸುವುದು, ಇತರ ತಳಿಗಳ ಭತ್ತವನ್ನು ಎಕರೆಗೆ ೮ ರಿಂದ ೧೬ ಕೆ.ಜಿ.ಯಂತೆ ಬಳಸಬಹುದು.

ಭೂಮಿ ಸಿದ್ಧತೆ: ನಾಟಿಗೆ ಭೂಮಿಯನ್ನು ಸಿದ್ಧಪಡಿಸುವ ರೀತಿಯಲ್ಲಿ ಸಿದ್ದಪಡಿಸಿ ಗದ್ದೆಯನ್ನು ಏರು ತಗ್ಗುಗಳಿಲ್ಲದೇ ಒಂದೇ ಸಮನಾಗಿರುವಂತೆ ಮಟ್ಟ ಮಾಡುವುದರಿಂದ ಬಿತ್ತನೆಯನ್ನು ಉತ್ತಮವಾಗಿ ಮಾಡಲು ಸಾಧ್ಯ. ಬಿತ್ತುವ ಮುನ್ನ ತಾಕಿನಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ. ಶಿಫಾರಸ್ಸು ಮಾಡಿದ ರಸಗೊಬ್ಬರದಲ್ಲಿ ಶೇ. ೫೦ ಭಾಗ ಸಾರಜನಕ, ಪೂರ್ತಿ ರಂಜಕ ಮತ್ತು ಪೊಟ್ಯಾಷ್‌ನ್ನು ಮಣ್ಣಿನಲ್ಲಿ ಸೇರಿಸಬೇಕು.

ಬಿತ್ತನೆ: ಮೊಳಕೆಯೊಡೆದ ಬೀಜವನ್ನು ಡ್ರಂ ಸೀಡರ್‌ನಲ್ಲಿರುವ ನಾಲ್ಕು ಡ್ರಂಗಳಿಗೂ ಸಮವಾಗಿ ಅಂದರೆ ಡ್ರಂನಲ್ಲಿ ಮುಕ್ಕಾಲು ಭಾಗ ಬರುವಂತೆ ತುಂಬಿ. ಡ್ರಂನ ಬಾಗಿಲನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಂಡು, ನಂತರ ಡ್ರಂ ಸೀಡರ್ ಅನ್ನು ಗದ್ದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಲುಗಳು ಬರುವಂತೆ ಕೈಯಿಂದ ಎಳೆಯಬೇಕು. ಸಾಮಾನ್ಯವಾಗಿ ಇದನ್ನು ಕೆಸರು ಗದ್ದೆಯಲ್ಲಿ ಎಳೆಯಲು ಒಬ್ಬ ಕಾರ್ಮಿಕನಿಂದ ಸಾಧ್ಯ, ಅವಶ್ಯಕತೆ ಕಂಡುಬAದರೆ ಇಬ್ಬರು ಕಾರ್ಮಿಕರು ಸೇರಿಕೊಂಡು ಎಳೆಯಬಹುದು. ಈ ರೀತಿ ಎಳೆದಾಗ ಗಾಲಿಗಳು ತಿರುಗಿ, ಈ ಮೂಲಕ ಡ್ರಂಗಳು ಸಹ ತಿರುಗಿ, ಡ್ರಂಗಳ ರಂಧ್ರಗಳ ಮೂಲಕ ಬಿತ್ತನೆ ಬೀಜ ಸಾಲಿನಲ್ಲಿ ಬೀಳುತ್ತವೆ. ಒಮ್ಮಗೆ ೮ ಸಾಲುಗಳು ಮಾಡುತ್ತವೆ. ಒಬ್ಬ ಮನುಷ್ಯ ಒಂದು ದಿನಕ್ಕೆ ಎರಡು ಎಕರೆ ಸಲೀಸಾಗಿ ಬಿತ್ತನೆ ಮಾಡಬಹುದು. ಬಿತ್ತಿದ ತಾಕುಗಳಲ್ಲಿ ಮೊದಲು ಹತ್ತು ದಿನಗಳವರೆಗೂ ತೇವ ಒಣಗದಂತೆ ಹಾಗೂ ನೀರು ಸಹ ನಿಲ್ಲದಂತೆ ಎಚ್ಚರಿಕೆ ವಹಿಸಿ. ಪೈರು ಬೆಳೆದಂತೆ ನೀರಿನ ಪ್ರಮಾಣವನ್ನು ಹೆಚ್ಚಿಸಿ, ಎರಡು ಇಂಚು ನೀರು ನಿಲ್ಲಿಸಬೇಕು.

ಅಂತರ ಬೇಸಾಯ ಮತ್ತು ಮೇಲುಗೊಬ್ಬರ: ಬಿತ್ತನೆ ಬೀಜವನ್ನು ನೇರವಾಗಿ ಬಿತ್ತುವುದರಿಂದ ಅಂತರ ಬೇಸಾಯ ಬಲು ಸುಲಭ. ಬಿತ್ತಿದ ೨೦ ಮತ್ತು ೪೦ ದಿವಸಗಳಲ್ಲಿ ಎರಡು ಸಾರಿ ಕಳೆ ಯಂತ್ರವಾದ “ಕೋನೋ ರೋಟರಿ ವೀಡರ್”ಅನ್ನು ಸಾಲುಗಳು ಮಧ್ಯೆ ಹಾಯಿಸಿದಾಗ ಭೂಮಿಯು ಸಡಿಲಗೊಂಡು ಕಳೆಗಳು ಮಣ್ಣಿನಲ್ಲಿ ಸೇರಲ್ಪಡುತ್ತವೆ. ರೋಟರಿ ವೀಡರ್‌ನ್ನು ಮೂರು ಸಾರಿ ಅಂದರೆ ೨೦, ೪೦ ಮತ್ತು ೬೦ ದಿವಸಗಳಲ್ಲಿ ಹಾಯಿಸುವುದರಿಂದ ಬುಡಕ್ಕೆ ಹೆಚ್ಚು ಮಣ್ಣು ಒತ್ತರಿಸಿ ಬೆಳೆ ಬೀಳುವುದಿಲ್ಲ. ಶಿಫಾರಸ್ಸು ಮಾಡಿದ ೩೦ ಕಿ.ಗ್ರಾ. ಸಾರಜನಕವನ್ನು ೨-೩ ಹಂತಗಳಲ್ಲಿ ಕೊಡುವುದರಿಂದ ಭತ್ತದ ಇಳುವರಿಯನ್ನು ಹೆಚ್ಚಿಸಬಹುದು.

ಕಳೆನಾಶಕಗಳ ಬಳಕೆ: ಉದಯಪೂರ್ವ ಕಳೆನಾಶಕವಾಗಿ ಎಕರೆಗೆ ಪ್ರೆಟಿಲಾಕ್ಲೋಕ್ ಮತ್ತು ಸೇಫನರ್ ಶೇ. ೩೦ ಇ.ಸಿ. ೪೦೦ ಮಿ.ಲೀ. ಅಥವಾ ಶೇ. ೧೦ರ ಪರೈಜೋಸಲ್ಪುರಾನ್ ಈಥೈಲ್ ೧೦೦ ಗ್ರಾಂ. ಪುಡಿಯನ್ನು ೩೦ ಕಿ.ಗ್ರಾಂ. ಹುಡಿಯಾದ ಮರಳಿನೊಡನೆ ಬೆರೆಸಿ, ಬಿತ್ತನೆ ಮಾಡಿದ ೩ ರಿಂದ ೫ ದಿವಸಗಳೊಳಗಾಗಿ ಗದ್ದೆಯಲ್ಲಿ ಎಲ್ಲಾ ಭಾಗಕ್ಕೂ ಬೀಳುವ ಹಾಗೆ ಎರಚಬೇಕು. ಕಳೆನಾಶಕವನ್ನು ಉಪಯೋಗಿಸುವ ಮುಂಚೆ ಗದ್ದೆಗೆ ನೀರು ಹಾಯಿಸಿ ಬಸಿಯಬೇಕು. ಬಸಿದ ನಂತರ ಕಳೆನಾಶಕವನ್ನು ಎರಚಬೇಕು. ಕಳೆನಾಶಕ ಎರಚಿದ ೪೮ ಗಂಟೆಗಳ ನಂತರ ನೀರು ಹಾಯಿಸಿ ಬಸಿಯಬೇಕು. ಜಿಲ್ಲೆಯ ಹಲವೆಡೆ ಇದೀಗ ಈ ಪ್ರಯತ್ನ ಯಶಸ್ಸು ಕಾಣುತ್ತಿದೆ.

ವಿಶೇಷ ಸೂಚನೆ: ಡ್ರಂ ಸೀಡರ್‌ನಿಂದ ಭತ್ತ ಬಿತ್ತನೆ ಮಾಡಿ ಬಹಳ ಸೊಗಸಾಗಿ ಬೆಳೆದಿರುವ ಭತ್ತದ ತಾಕುಗಳನ್ನು ಮಡಿಕೇರಿಯ ಡೈರಿ ಪಾರಂನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ರೈತರು ವೀಕ್ಷಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಡಾ. ಬಸವಲಿಂಗಯ್ಯ, ಕೃಷಿ ವಿಜ್ಞಾನಿ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ