ಮಡಿಕೇರಿ, ನ. ೨೮: ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಶನ್ ವತಿಯಿಂದ ತಾ.೩೦ರಂದು ಬೆಳಿಗ್ಗೆ ೧೦.೩೦ಕ್ಕೆ ಮೇಕೇರಿ ಮಖಾಂ ಸಭಾಂಗಣದಲ್ಲಿ ಮರ್ಹೂಂ ತಾಜುಲ್ ಉಲಮಾ, ನೂರುಲ್ ಉಲಮಾ ಮತ್ತು ಶೈಖುನಾ ಮಹಮೂದ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಕೂರ್ಗ್ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯಿದ್ ಕಿಲ್ಲೂರ್ ತಙಳ್, ಎಸ್ವೈಎಸ್ ಅಧÀ್ಯಕ್ಷ ಇಲ್ಯಾಸ್ ತಙಳ್, ಸಹಾಯಕ ಖಾಝಿ ಶಾದುಲಿ ಫೈಝಿ, ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಮರ್ಕಝುಲ್ ಹಿದಾಯ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ, ಎಸ್ಎಸ್ಎಫ್ ಅಧÀ್ಯಕ್ಷ ಶಾಫಿ ಸಹದಿ, ಕೊಡಗು ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮದನೀಸ್ ಅಸೋಸಿಯೇಶನ್ ಅಧ್ಯಕ್ಷ ಹಮೀದ್ ಮದನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.