ಸೋಮವಾರಪೇಟೆ, ನ. ೨೮: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಚರಂಡಿಗಳು ಹಾಗೂ ರಸ್ತೆಯ ಆಸು ಪಾಸಿನಲ್ಲಿ ತ್ಯಾಜ್ಯ ಶೇಖರಣೆಗೊಂಡಿದ್ದು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಡುವ ಮೂಲಕ ಡೆಂಗ್ಯೂ ಭೀತಿ ಎದುರಾಗಿದೆ.

ಕಾಟಾಚಾರಕ್ಕೆ ಚರಂಡಿ ಸ್ವಚ್ಛ ಮಾಡುತ್ತಿರು ವುದರಿಂದ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಅಪರೂಪಕ್ಕೊಮ್ಮೆ ಪೌರ ಕಾರ್ಮಿಕರು ಬಂದು ರಸ್ತೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ಇಲ್ಲಿನ ಬಸವೇಶ್ವರ ದೇವಾಲಯದ ಸಮೀಪದ ಮಮತ ಅವರ ಮನೆಯ ಎದುರಿನ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು, ಸ್ವಚ್ಛ ಮಾಡದಿರುವುದರಿಂದ ಡೆಂಗ್ಯೂ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾಯಿಲೆ ಹಬ್ಬುವ ಮುನ್ನ ಎಲ್ಲೆಡೆ ಸ್ವಚ್ಛ ಮಾಡಿ ಔಷಧಿ ಸಿಂಪಡಿಸುವAತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.