ಶನಿವಾರಸಂತೆ, ನ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ದಲಿತ ಹಿತರಕ್ಷಣಾ ಒಕ್ಕೂಟ ತಾಲೂಕು ಘಟಕದ ಅಧ್ಯಕ್ಷ ಡಿ.ಎನ್. ವಸಂತ್ ಅವರಿಗೆ ಅಂಬೇಡ್ಕರ್ ದಲಿತ ಸೇನೆ ಹಾಗೂ ಶುಭೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ‘ಬುದ್ಧ ಭೀಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದೊಡ್ಡಕೊಡ್ಲಿ ಗ್ರಾಮದ ನಿರ್ವಾಣಯ್ಯ-ಸಾವಿತ್ರಿ ದಂಪತಿಯ ಪುತ್ರ ಡಿ.ಎನ್. ವಸಂತ್ ಕೋವಿಡ್ ಲಾಕ್ ಡೌನ್ ಸÀಂದರ್ಭ ಕೊಡ್ಲಿಪೇಟೆಯ ಸಂತೆ ಮಾರುಕಟ್ಟೆಯಲ್ಲಿ ನೆಲೆಸಿದ್ದ ನಿರ್ಗತಿಕರು ಹಾಗೂ ಕೆಲ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ನೀಡಿ ಸಹಕರಿಸಿದ್ದರು.

ನೊಂದವರ ಧ್ವನಿಯಾಗಿ ನಿಂತು ಹಕ್ಕುಗಳನ್ನು ಕೊಡಿಸುವ ಮುಂದಾಳತ್ವ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ನಿಂದನೆ, ರೈತರ ಭೂಮಿ ಸಮಸ್ಯೆ ಕೃಷಿ-ಕೃಷಿಯೇತರ ವಿಷಯಗಳ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಸಂತ್‌ರವರ ಜನಪರ ಕಾಳಜಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.