ವೀರಾಜಪೇಟೆ, ನ. ೨೮: ತನ್ನ ಹೆಸರಿನಲ್ಲಿ ಕೇರಳ ರಾಜ್ಯದಲ್ಲಿರುವ ವಾಣಿಜ್ಯ ಸಂಕೀರ್ಣ ನಾಶಗೊಳಿಸಲು ಸ್ಥಳೀಯ ಸಂಸ್ಥೆ ಜಾರಿಗೊಳಿಸಿದ್ದ ಸರಕಾರೀ ಆದೇಶ ಕಾರ್ಯಗತವಾಗದಂತೆ ನಕಲಿಯಾಗಿ ರಾಷ್ಟçಪತಿಗಳ ಹೆಸರು ಮತ್ತು ಮೊಹರನ್ನು ಸೃಷ್ಟಿಸಿ ಪತ್ರ ತಯಾರಿಸಿದ ಆರೋಪದಡಿಯಲ್ಲಿ ಕಳೆದ ಕೆಲವು ತಿಂಗಳುಗಳಿAದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕಣ್ಣನೂರಿನ ಉದ್ಯಮಿ ಪಿ.ಪಿ.ಉಮ್ಮರ್ ಕುಟ್ಟಿ ಎಂಬಾತ ವೀರಾಜಪೇಟೆಯಲ್ಲಿ ಕೇರಳ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣಕ್ಕೆ ಸಂಬAಧಪಟ್ಟAತೆ ಉಮ್ಮರ್ಕುಟ್ಟಿ ಅವರ ಸಹೋದರ ವಿ.ಪಿ.ಎಂ. ಅಶ್ರಫ್ ಎಂಬವರು ಕಳೆದ ತಿಂಗಳು ೬ನೇ ತಾರೀಖು ಬಂಧನಕ್ಕೆ ಒಳಗಾಗಿದ್ದರು. ದೂರು ದಾಖಲಾದ ಹಿನೆÀ್ನಲೆಯಲ್ಲಿ ಉಮ್ಮರ್ಕುಟ್ಟಿಯವರು ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ವಿದೇಶದಿಂದ ಬಂದು ನೇರವಾಗಿ ವೀರಾಜಪೆಟೆಗೆ ಸಮೀಪದ ರೆಸಾರ್ಟ್ ಒಂದರಲ್ಲಿ ಠಿಕಾಣಿ ಹೂಡಿದ್ದ ವಿವರ ಕೇರಳ ಪೋಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದರು. ಕಳೆದ ಶುಕ್ರವಾರದಂದು ಜನನಿಬಿಡ ವೀರಾಜಪೇಟೆ- ಗೋಣಿಕೊಪ್ಪ ರಸ್ತೆಯಲ್ಲಿ ಉಮ್ಮರ್ಕುಟ್ಟಿಯವರು ತನ್ನ ಕೆ.ಎಲ್.೧೩-೯೮೯೯ ಇನ್ನೋವಾ ಕಾರಿನಲ್ಲಿ ಪ್ರತ್ಯಕ್ಷರಾದರು. ಹೊಂಚು ಹಾಕಿದ್ದ ಕೇರಳ ಪೋಲೀಸರು ಕಾರನ್ನು ಹಿಂಬಾಲಿಸಿದರು. ಕಾರು ನಿಲ್ಲಿಸದೆ ವೇಗವಾಗಿ ಚಲಿಸಿದ ಪರಿಣಾಮವಾಗಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯಿತು. ಕಾರಿನಿಂದ ಇಳಿಯಲು ನಿರಾಕರಿಸಿದ ಉಮ್ಮರ್ಕುಟ್ಟಿಯವರನ್ನು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪೊಲೀಸರು ಕಾರಿನ ಗಾಜನ್ನು ಪುಡಿಮಾಡಿ ಎಳೆದೊಯ್ದಿದ್ದಾರೆ. ಇದೀಗ ಉಮ್ಮರ್ಕುಟ್ಟಿಯವರು ಕಣ್ಣನೂರು ಪೊಲೀಸರ ವಶದಲ್ಲಿದ್ದಾರೆ. ಇನ್ನೋವಾ ಕಾರನ್ನು ಅತಿವೇಗ ಮತ್ತು ಅಜಾಗರೂಕತೆ ಯಿಂದ ಚಾಲಿಸಿ ಮತ್ತೊಂದು ವಾಹನಕ್ಕೆ ಡಿಕ್ಕಿಪಡಿಸಿದ ಬಗ್ಗೆ ಈತನ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಉಮ್ಮರ್ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿಯೂ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಕಣ್ಣನೂರು ನಗರ ವ್ಯಾಪ್ತಿಯ ಪಯ್ಯಾಂಬಲಮ್ ಎಂಬಲ್ಲಿ ಅವರಿಗೆ ಸೇರಿದ ಅನಧಿಕೃತ ವಾಣಿಜ್ಯ ಸಂಕೀರ್ಣ ಒಡೆದು ಹಾಕಲು ಕಣ್ಣನೂರು ನಗರಸಭೆ ನೀಡಿದ ಆದೇಶಕ್ಕೆ ವಿರುದ್ಧವಾಗಿ ರಾಷ್ಟçಪತಿಗಳ ನಕಲಿ ಪತ್ರ ತಯಾರುಪಡಿಸಿ ಸರಕಾರ ಹಾಗೂ ನಗರಸಭೆಯನ್ನು ಇವರು ವಂಚಿಸಿದ್ದರು. ತನಿಖಾಧಿಕಾರಿ ಕಣ್ಣನೂರು ವೃತ್ತ ಪೊಲೀಸ್ ಅಧೀಕ್ಷಕ ಶ್ರೀಜಿತ್ ಕೊಡೇರಿಯವರ ನೇತೃತ್ವದ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.