ಸೋಮವಾರಪೇಟೆ, ನ. ೨೮: ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀರಂಗ ಐತಾಳ್‌ರವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಯಿತು.

ದೇವ ಪ್ರಶ್ನೆಯಲ್ಲಿ ದೇವಾಲಯದಲ್ಲಿ ನಡೆಯುತ್ತಿರುವ ಪೂಜಾ ವಿಧಿವಿಧಾನಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ದೇವರುಗಳಿಗೆ ತೃಪ್ತಿ ತಂದಿದೆ. ಪೂಜಾ ಕಾರ್ಯಗಳನ್ನು ಇದೇ ರೀತಿ ಮುಂದುವರೆಸುವAತೆ ಆಡಳಿತ ಮಂಡಳಿಯವರಿಗೆ ಐತಾಳರು ಸಲಹೆ ನೀಡಿದರು.

ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವದ ಕುರಿತು ದೇವಾಲಯದ ತಂತ್ರಿಗಳ ಬಳಿ ಚರ್ಚಿಸಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸಿ ಮುಂದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಲಾಯಿತು. ಕ್ಷೇತ್ರದಲ್ಲಿ ನಡೆಸಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೇವರ ಒಪ್ಪಿಗೆ ಇದ್ದು, ಶಿಲ್ಪಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವAತೆ ಸಲಹೆ ನೀಡಿದರು.

ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಜನನ ಮತ್ತು ಮರಣದ ಸೂತಕದವರು ದೇವಾಲಯ ಪ್ರವೇಶ ಮಾಡಿರುವುದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬAದಿದೆ. ದೇವಾಲಯದ ನಿಯಮಗಳ ಪ್ರಕಾರ ಜನನ ಮತ್ತು ಮರಣದ ಸೂತಕದವರು ೧೬ದಿನಗಳ ನಂತರ ದೇವಾಲಯ ಪ್ರವೇಶ ಮಾಡತಕ್ಕದ್ದು, ಅಲ್ಲದೇ ಸ್ತಿçÃಯರು ಕೂಡ ದೇವಾಲಯ ಪ್ರವೇಶ ಮಾಡುವ ಸಂದರ್ಭ ಎಚ್ಚರಿಕೆ ವಹಿಸಬೇಕೆಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ತಾಂಬೂಲ ಪ್ರಶ್ನೆ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ,ವಿನೋದ್, ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಮುತ್ತಪ್ಪಸ್ವಾಮಿ ದೇವಾಲಯದ ಅರ್ಚಕ ಸುದೀಶ್ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.