ಶನಿವಾರಸಂತೆ, ನ. ೨೮: ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ೨೪೮೬ ಸದಸ್ಯರಿದ್ದು, ಸಂಘಕ್ಕೆ ರೂ.೨೪,೦೪,೮೦೭ ಲಕ್ಷ ನಿವ್ವಳ ಲಾಭ ಲಭಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಹೇಳಿದರು. ಸಮೀಪದ ನಿಡ್ತ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಠೇವಣಿ, ಪಾಲುಹಣ ಅಧಿಕಗೊಳಿಸಲು ಸಂಘದ ಆಡಳಿತ ಮಂಡಳಿ ಶ್ರಮಿಸುತ್ತಿದ್ದು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಹಾಗೂ ಸಹಕಾರ ಇಲಾಖೆ ಮಾರ್ಗದರ್ಶನ ನೀಡುತ್ತಿದೆ. ಸಂಘ ಅಭಿವೃದ್ಧಿ ಪಥದಲ್ಲಿ ಸಾಗಲು ಸರ್ವ ಸದಸ್ಯರು, ಹಿರಿಯ ಸಹಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಚಿನ್ನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸಿ.ಪಿ. ತೀರ್ಥಾನಂದ್, ನಿರ್ದೇಶಕರಾದ ಎಚ್.ಪಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಎಂ.ಎಸ್. ತಂಗಮ್ಮ, ಜಿ.ಬಿ. ಲಿಂಗರಾಜ್, ಎನ್.ಆರ್. ಕಾರ್ತಿಕ್, ಡಿ.ಎನ್. ಜಗದೀಶ್, ಎ.ಜೆ. ಪೊನ್ನಪ್ಪ, ಎಚ್.ಎಂ. ದೊಡ್ಡೇಗೌಡ, ಎನ್.ಆರ್. ಪುಟ್ಟಯ್ಯ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜೆ. ಮಂಜಪ್ಪ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಭರತ್ ಕುಮಾರ್, ಸಂಘದ ಸಿಬ್ಬಂದಿ ಎಂ.ಈ. ಹೂವಣ್ಣ, ಆರ್. ಧರಣಿ, ಜೆ.ಯು. ಕೃಪಾ, ಬಿ.ಆರ್. ಪ್ರದೀಪ್ ಹಾಗೂ ಪಿಗ್ಮಿ ಸಂಗ್ರಾಹಕ ಎಂ.ಸಿ. ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.