ನಾಪೋಕ್ಲು, ನ. ೨೮: ವಾಮಾಚಾರದ ಉದ್ದೇಶದಿಂದ ಅಪ್ರಾಪ್ತ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣ ಕಕ್ಕಬ್ಬೆ ಸಮೀಪದ ವಯಕೋಲಿನಲ್ಲಿ ನಡೆದಿದೆ. ಈ ಪ್ರಕರಣ ಕೊಡಗು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಉಳಿದ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಹಮ್ಮದ್ ರಫಿ, ಸಿಯಾಬ್ ಮತ್ತು ಹಂಸ ಅಪಹರಣ ಪ್ರಕರಣದ ಬಂಧಿತ ಆರೋಪಿಗಳು. ಇವರು ಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಘಟನೆ ಹಿನ್ನೆಲೆ
ವಯಕೋಲ್ ಗ್ರಾಮದ ಮಹಮ್ಮದ್ ರಫಿ, ಎಮ್ಮೆಮಾಡು ಗ್ರಾಮದ ಹಂಸ ಹಾಗೂ ಕೇರಳ ರಾಜ್ಯದ ಸಿಯಾಬ್ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಶನಿವಾರ ಸಂಜೆ ೫ ಗಂಟೆ ಸಮಯಕ್ಕೆ ವಯಕೋಲ್‌ನ ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಬಾಲಕನ ಮೇಲೆ ಗುಂಪೊAದು ಹಲ್ಲೆ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಧರ್ಮಗುರುಗಳು ಸ್ಥಳಕ್ಕೆ ತೆರಳಿದಾಗ ಬಾಲಕನನ್ನು ರಸ್ತೆಯಲ್ಲಿ ಬಿಟ್ಟು ಕಾರಿನಲ್ಲಿ ಕೈಕಾಡು ನಾಪೋಕ್ಲು ರಸ್ತೆ ಮೂಲಕ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದು, ಸ್ಥಳೀಯರು ತಕ್ಷಣವೇ ಕಾರನ್ನು ಹಿಂಬಾಲಿಸಿದ್ದಾರೆ. ಬಳಿಕ ಕಾರನ್ನು ಕೈಕಾಡಿನ ತೋಟವೊಂದರ ಸಮೀಪ ನಿಲ್ಲಿಸಿ ಆರೋಪಿಗಳು ತೋಟದೊಳಗೆ ನುಗ್ಗಿ ತಲೆಮರೆಸಿ ಕೊಂಡಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಮಕ್ಕಳ ಕಳ್ಳರ ಗುಂಪು ಗ್ರಾಮಕ್ಕೆ ಬಂದಿದೆ ಎಂದು ಕಾಡ್ಗಿಚ್ಚಿ ನಂತೆ ಸಾಮಾಜಿಕ ಜಾಲತಾಣದ ಮೂಲಕ ಹರಿದಾಡಿದೆ. ತೋಟ ದೊಳಗೆ ನುಗ್ಗಿ ತಲೆಮರೆಸಿ ಕೊಂಡವರಿ ಗಾಗಿ ಪೊಲೀಸರ ಜೊತೆ ಸ್ಥಳೀಯರು ಮಧ್ಯರಾತ್ರಿ ತನಕ ಹುಡುಕಾಟ ನಡೆಸಿದ್ದಾರೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ರಾತ್ರಿ ಘಟನೆ ಸಂಬAಧ ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ತೆರಳಿದ ನಾಪೋಕ್ಲು ಪೊಲೀಸರು ಆರೋಪಿ ಗಳಿಗಾಗಿ ಶೋಧ ನಡೆಸಿ ನಡುರಾತ್ರಿಯಲ್ಲಿ ಕೈಕಾಡು ರಸ್ತೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ಮೊದಲು ಮಕ್ಕಳ ಕಳ್ಳರು ಗುಂಪು ಎಂಬ ಆರೋಪದ ಹಿನ್ನೆಲೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆರೋಪಿಗಳ ಬಂಧನದ ಬಳಿಕ ಅಪಹರಣ ಯತ್ನದ ಹಿಂದಿನ ಅಸಲಿತ್ತು ಬಹಿರಂಗಗೊAಡಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ನಿರ್ದೇಶನ ದಂತೆ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅನೂಪ್ ಮಾದಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಪೊಲೀಸ್ ಠಾಣಾ ಉಪನಿರೀಕ್ಷಕ ಆರ್.ಕಿರಣ್, ಎಎಸ್‌ಐ ಕುಶಾಲಪ್ಪ, ಹೆಡ್‌ಕಾನ್ಸ್ಟೇಬಲ್‌ಗಳಾದ ರವಿಕುಮಾರ್, ಮಧುಸೂದನ್, ಸಿಬ್ಬಂದಿಗಳಾದ ನವೀನ್, ಹರ್ಷ, ಪ್ರಸನ್ನ, ಮಹಂತೇಶ್, ಆಶಿಕ್, ಚಾಲಕ ಶರೀಫ್ ಇದ್ದರು.
ಕೃತ್ಯಕ್ಕೆ ಬಳಸಿದ ಮಾರುತಿ ಸುಝು಼ಕಿ ಎಸ್-ಪ್ರೆಸೋ (ಏಂ ೧೨ ಒಆ ೦೨೫೧) ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ನಿಧಿಗಾಗಿ ಅಪಹರಣ.?
ನಿಧಿಗಾಗಿ ಬಲಿ ನೀಡಲು ಬಾಲಕನನ್ನು ಅಪಹರಣ ನಡೆಸಲಾಗಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಮ್ಮೆಮಾಡು ಗ್ರಾಮದ ಮನೆಯೊಂದಕ್ಕೆ ವಾಮಾಚಾರಕ್ಕಾಗಿ ತಂಡ ಬಂದಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೇರಳ ಮೂಲದ ಮಂತ್ರವಾದಿ ಮೂಲಕ ವಾಮಾಚಾರ ನಡೆಸಿ ನಿಧಿ ಪಡೆದುಕೊಳ್ಳಲು ಆರೋಪಿಗಳು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಿಂದ ಕೊಕೇರಿ ಸುತ್ತಮುತ್ತ ನಿಧಿಗಾಗಿ ಹುಡುಕಾಟ ನಡೆಯುತ್ತಿದೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು. ಈ ಘಟನೆ ಇದೀಗ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಕಳೆದ ವರ್ಷ ಇದೇ ರೀತಿಯ ಘಟನೆ ಕೊಟ್ಟಮುಡಿಯಲ್ಲಿ ನಡೆದಿದ್ದು ಹಲವಾರು ಮಂತ್ರವಾದಿಗಳು ಕೇರಳದಿಂದ ಬಂದಿದ್ದು ಇವರನ್ನು ಬಂಧಿಸಲಾಗಿತ್ತು. ಅದರಂತೆ ೨೦೧೮ ರಲ್ಲಿ ಚೇಲವಾರದಲ್ಲಿ ನಿಧಿಗಾಗಿ ಬಲಿ ಪಡೆದಿರುವ ಘಟನೆ ಕೂಡ ನಡೆದಿತ್ತು.
- ದುಗ್ಗಳ / ಪ್ರಭಾಕರ್