ಮಡಿಕೇರಿ, ನ. ೨೮: ಡಾ. ರಾಜ್‌ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ, ಬೆಂಗಳೂರುರವರು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತದ ಪ್ರಬಂಧ ಸ್ಪÀರ್ಧೆಯಲ್ಲಿ ಚೇರಂಬಾಣೆಯ ಲೀಲಾವತಿ ಜಗನ್ನಾಥ್ ಕೂಡಕಂಡಿ ಎರಡನೇ ಬಹುಮಾನ ಪಡೆದುಕೊಂಡಿದ್ದಾರೆ.

ಇವರು ೨೦೧೪ರಲ್ಲಿ ಆಕಾಶವಾಣಿ, ಭಾರತೀಯ ವಿದ್ಯಾಭವನ, ರೋಟರಿ ಮಿಸ್ಟಿ ಹಿಲ್ಸ್ ವೈಸ್‌ಮೆನ್ ಕ್ಲಬ್ ಮಡಿಕೇರಿ ಪ್ರಾಯೋಜಿತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ೨೦೧೮ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಯುಕ್ತ ಕಾರ್ಟೂನ್ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದರು.

ರೋಟರಿ ಮಿಸ್ಟಿಹಿಲ್ಸ್ ಮತ್ತು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಕೊಡಗು ಜಿಲ್ಲೆ ಆಯೋಜಿತ ಮತದಾನ ಕುರಿತು ಚಿತ್ರಕಲಾ ಸ್ಪರ್ಧೆಯಲ್ಲಿ ೨೦೧೯ರಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಇವರು ಕೂಡಕಂಡಿ ಜಗನ್ನಾಥ್ ಅವರ ಪತ್ನಿ ಮತ್ತು ಸಾಂದೀಪನಿ ವಿದ್ಯಾಪೀಠ ಶಾಲೆಯ ಶಿಕ್ಷಕಿ.