ನಾಪೋಕ್ಲು, ನ. ೨೮: ಸರ್ವರ ಸಹಕಾರದಿಂದ ಸಂಘವು ಅಭಿವೃದ್ಧಿಯತ್ತ ಸಾಗಿದೆ. ಸಂಘದ ನೂತನ ಕಟ್ಟಡಕ್ಕೆ ಸರ್ವರ ಸಹಕಾರ ಮುಖ್ಯ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್‌ಮುದ್ದಪ್ಪ ತಿಳಿಸಿದರು. ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘವು ೫೬೭ ಸದಸ್ಯರನ್ನು ಹೊಂದಿದ್ದು ದುಡಿಯುವ ಬಂಡವಾಳ ರೂ. ೪೧ ಲಕ್ಷ ಇದೆ ಎಂದರು. ಸಂಘದ ನೂತನ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷರಾದ ಎನ್.ಯು. ಕಸ್ತೂರಿ, ನಿರ್ದೇಶಕರಾದ ಕೆ.ಕೆ. ಗಣೇಶ್, ಕೆ.ಎಂ. ಅರುಣ, ಎನ್.ಟಿ. ಮುತ್ತಪ್ಪ, ಬಿ.ಕೆ. ಕುಟ್ಟಪ್ಪ, ಹೆಚ್.ಎ. ಬೊಳ್ಳು, ಕೆ.ಜಿ. ಮುತ್ತಮ್ಮ, ಪಿ.ಎ. ಮಹೇಶ್, ಬಿ.ಆರ್. ರಾಮಣ್ಣ, ಕಾರ್ಯದರ್ಶಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ ಸಿಬ್ಬಂದಿಗಳಾದ ಎಂ.ಕೆ. ರಾಜಪ್ಪ, ಟಿ.ಪಿ. ಮುತ್ತಪ್ಪ ಇದ್ದರು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿದರು. ಕೆ.ಎಂ. ಅರುಣ ವಂದಿಸಿದರು.