ಮಡಿಕೇರಿ, ನ. ೨೮: ಕರ್ನಾಟಕ ಸರಕಾರದ ಪುರಾತತ್ವ ಸಂಗ್ರಹಾಲಯ ಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪುರಾತನ ಸ್ಮಾರಕಗಳು ಮತ್ತಿತರ ವಿಚಾರಗಳಿಗೆ ಸಂಬAಧಿಸಿದAತೆ ಗ್ರಾಮವಾರು ಸರ್ವೆಗೆ ಆದೇಶಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅವನತಿಗೆ ತುತ್ತಾಗಿರುವ ಅರಕ್ಷಿತ ಸ್ಮಾರಕಗಳು, ಶಿಲಾಶಿಲ್ಪಗಳು, ಶಾಸನಗಳು ಮತ್ತು ಇತರೆ ಪ್ರಾಚ್ಯವಸ್ತು ಅವಶೇಷಗಳನ್ನು ಗ್ರಾಮವಾರು ಸರ್ವೆ ಕಾರ್ಯದ ಮೂಲಕ ಗುರುತಿಸಲು ಉದ್ದೇಶಿಸಲಾಗಿದೆ.
ಈ ರೀತಿ ಗಮನಕ್ಕೆ ಬರುವ ಇವುಗಳನ್ನು ದಾಖಲೀಕರಿಸುವ ಕಾರ್ಯಕ್ರಮವನ್ನು ಕೈಗೊಳ್ಳ ಲಾಗುತ್ತಿದ್ದು, ಇದಕ್ಕೆ ಈಗಾಗಲೇ ಚಾಲನೆಯನ್ನೂ ನೀಡಲಾಗಿದೆ. ಈ ನಿಟ್ಟಿನಲ್ಲಿ ಸದರಿ ಉದ್ದೇಶಕ್ಕೆ ಸಂಬAಧಿಸಿದAತೆ ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿರುವ ಪ್ರಾಚೀನ ಅವಶೇಷಗಳ ಮಾಹಿತಿಯನ್ನು ಇಲಾಖೆಗೆ ಒದಗಿಸಬಹುದಾಗಿದೆ. ಈ ಕುರಿತಾದ ಹೆಚ್ಚಿನ ವಿವರಕ್ಕೆ ರೇಖಾ ಬಿ.ಪಿ. ಕ್ಯೂರೇಟರ್, ಸರಕಾರಿ ವಸ್ತು ಸಂಗ್ರಹಾಲಯ ಮಡಿಕೇರಿ ಮೊಬೈಲ್ ಸಂಖ್ಯೆ - ೯೯೧೬೧೫೪೨೩೭ ಇವರನ್ನು ಸಂಪರ್ಕಿಸಬಹುದಾಗಿದೆ.