ನಾಪೋಕ್ಲು, ನ. ೨೭: ಸದಸ್ಯರು ಸಂಘದಿAದ ಪಡೆದಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಹೇಳಿದರು.
ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘದ ೪೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಸದಸ್ಯರ ಸಹಕಾರದಿಂದಲೇ ನಡೆಯುತ್ತವೆ. ಸಂಘದ ಏಳಿಗೆಗೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.
ಸAಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಸಂಘಕ್ಕೆ ರೂ. ೧೭ ಲಕ್ಷ ಲಭಿಸಿದೆ. ಇದರಲ್ಲಿ ಸಂಘದ ಕಟ್ಟಡದ ಬಳಿ ತಡೆಗೋಡೆ, ಇಂಟರ್ಲಾಕ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಾಮೀನು ಮತ್ತು ಗೊಬ್ಬರ ಸಾಲ ವಾಯಿದೆ ಮೀರಿದ್ದು, ಸದಸ್ಯರು ಸಾಲ ಮರುಪಾವತಿ ಮಾಡುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭೆಯಲ್ಲಿದ್ದ ಸದಸ್ಯರು, ಸಾಲ ಮರು ಪಾವತಿ ಮಾಡದವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಪೊನ್ನೋಲತಂಡ ಸೋಮಣ್ಣ, ಅನ್ನಾಡಿಯಂಡ ದಿಲೀಪ್, ಪಾಂಡAಡ ನರೇಶ್, ಮಾರ್ಚಂಡ ಗಣೇಶ್ ಮತ್ತಿತರರು ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಎ.ಎನ್. ಅಯ್ಯಪ್ಪ, ಕೆ.ಎಂ. ಬೋಪಣ್ಣ, ಎನ್.ಸಿ. ಹರೀಶ್ ಪೂವಯ್ಯ, ಕೆ.ಎ. ಅಶೋಕ್, ಪಿ.ಪಿ. ಪ್ರಮೀಳಾ, ಕೆ.ಕೆ. ಗಿರೀಶ್, ಕೆ.ಎಂ. ನಾಣಯ್ಯ, ಪಿ.ಟಿ. ಕಾರ್ಯಪ್ಪ, ಮೇಲ್ವಿಚಾರಕ ಅಯ್ಯಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳ ಇದ್ದರು.
ನಿರ್ದೇಶಕಿ ಪಿ.ಬಿ. ಸುನಿತಾ ಪ್ರಾರ್ಥನೆ, ಅಧ್ಯಕ್ಷ ರಘು ತಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಬಿ.ಎಂ. ಸುರೇಶ್ ಬೆಳ್ಯಪ್ಪ ವಂದಿಸಿದರು.