ಮಡಿಕೇರಿ, ನ. ೨೭: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡAತೆ ಬಾಡಗರಕೇರಿಯಲ್ಲಿರುವ ಮರೆನಾಡು ಕೊಡವ ಸಮಾಜದಲ್ಲಿ ಪುತ್ತರಿ ಕೋಲ್‌ಮಂದ್ ಕಾರ್ಯಕ್ರಮ ತಾ. ೨೪ ರಂದು ಜರುಗಿತು.

ನಾಡ್‌ತಕ್ಕರಾದ ಕಾಯಪಂಡ ಐನ್‌ಮನೆಯಿಂದ ಒಡ್ಡೋಲಗ ಸಹಿತವಾಗಿ ತೆರಳಿ ಬಿರುನಾಣಿಯ ತಕ್ಕರಾದ ಚಂಗಣಮಾಡ, ತೆರಾಲುವಿನ ತಕ್ಕರಾದ ಬೊಳ್ಳೆರ ಕುಟುಂಬ ಸೇರಿದಂತೆ ಸ್ಥಳೀಯ ವ್ಯಾಪ್ತಿಯ ಗ್ರಾಮಸ್ಥರು, ವಿವಿಧ ಕುಟುಂಬದವರು ಸಮಾಜದ ಆವರಣಕ್ಕೆ ತೆರಳಿದರು.

ಬಳಿಕ ಕೋಲಾಟ್ ಸೇರಿದಂತೆ ವಿವಿಧ ಜನಪದ ಪ್ರದರ್ಶನಗಳು ಜರುಗಿದವು. ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನ, ಬಿರುನಾಣಿ, ಪರಕಟಗೇರಿ ಮಹಿಳಾ ತಂಡದಿAದ ಉಮ್ಮತ್ತಾಟ್ ಜರುಗಿತು.

ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ, ಕಾರ್ಯದರ್ಶಿ ಮಲ್ಲೇಂಗಡ ಧನಂಜಯ, ನಾಡ್‌ತಕ್ಕರಾದ ಕಾಯಪಂಡ ಅಯ್ಯಪ್ಪ, ಚಂಗಣಮಾಡ ಮುತ್ತಣ್ಣ, ಮುಖ್ಯ ಅತಿಥಿಯಾಗಿದ್ದ ಕಾಳಿಮಾಡ ಮುತ್ತಣ್ಣ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಜೆ ಶ್ರೀ ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿಯ ಮೂಲಕ ಫಲಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.